ಮಾಡಿ ನೋಡಿ ಎಲೆಕೋಸು ಬೋಂಡಾ

ಕಲ್ಪನಾ ಹೆಗಡೆ.

IMG_5340

ಬೇಕಾಗುವ ಸಾಮಾಗ್ರಿಗಳು:
ಚಿಕ್ಕ ಎಲೆಕೋಸು, ಅರ‍್ದ ಕಿಲೋ ಕಡಲೆ ಹಿಟ್ಟು, 1 ಲೋಟ ಅಕ್ಕಿ ಹಿಟ್ಟು, 1 ಚಮಚ ಕಾರದಪುಡಿ, 1 ಚಮಚ ಗರಂ ಮಸಾಲೆ, 2 ಚಮಚ ಸಾರಿನಪುಡಿ, ಚಿಟಿಕೆ ಇಂಗು, ರುಚಿಗೆ ತಕ್ಕಶ್ಟು ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು, 2 ಹಸಿಮೆಣಸಿನಕಾಯಿ, 4 ಈರುಳ್ಳಿ ಮತ್ತು ಅಡುಗೆ ಎಣ್ಣೆ.

ಮಾಡುವ ಬಗೆ:
ಮೊದಲು ಎಲೆಕೋಸನ್ನು ನೀರಿನಿಂದ ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಆನಂತರ ಈರುಳ್ಳಿಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಎಲೆಕೋಸು, ಈರುಳ್ಳಿಯನ್ನು ಸೇರಿಸಿ ಅದಕ್ಕೆ ಕಡಲೆಹಿಟ್ಟು, ಅಕ್ಕಿಹಿಟ್ಟು, ಕಾರದಪುಡಿ, ಗರಂ ಮಸಾಲೆ, ಸಾರಿನಪುಡಿ ಇಲ್ಲವೇ ಸಾಂಬಾರಪುಡಿ, ಇಂಗು, ರುಚಿಗೆ ತಕ್ಕಶ್ಟು ಉಪ್ಪು, ಈರುಳ್ಳಿ ಹಾಕಿ ನೀರಿನಲ್ಲಿ ಚೆನ್ನಾಗಿ ಕಲಸಿಕೊಳ್ಳಿ. ಆಮೇಲೆ ಕೊತ್ತಂಬರಿ ಸೊಪ್ಪು, ಕರಿಬೇವು ಹಾಗೂ ಹಸಿಮೆಣಸಿನಕಾಯಿಯನ್ನು ಸಣ್ಣಗೆ ಹೆಚ್ಚಿ ಹಾಕಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದಿದ ನಂತರ ಹದವಾದ ಹಿಟ್ಟನ್ನು ಉಂಡೆತರಹ ಮಾಡಿ ಎಣ್ಣೆಯಲ್ಲಿ ಹದವಾಗಿ ಕರಿಯಿರಿ. ಕರಿದ ಎಲೆಕೋಸ ಬೋಂಡಾವನ್ನು ತಟ್ಟೆಗೆ ಹಾಕಿ ಜೊತೆಗೆ ಕಾರ ಹಾಗೂ ಸಿಹಿ ಇರುವ ಟೊಮೆಟೊ ಸಾಸನ್ನು ಹಾಕಿ ತಿನ್ನಲು ನೀಡಿ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications