ಕನ್ನಡಕ್ಕೆ ಬೇಕಿದೆ ಪದಗಳ ಗಂಟು

– ಪ್ರಿಯಾಂಕ್ ಕತ್ತಲಗಿರಿ.

language-big
ಜಗತ್ತಿನಲ್ಲಿರುವ ನುಡಿಗಳೆಲ್ಲವೂ ಒಂದಲ್ಲ ಒಂದು ವಲಯಗಳಲ್ಲಿ ಬಳಕೆಯಾಗುತ್ತಲೇ ಇರುತ್ತವೆ. ಕೆಲವು ನುಡಿಗಳು ಮಾತಿಗೆ ಮಾತ್ರ ಸೀಮಿತಗೊಂಡಿದ್ದರೆ, ಕೆಲವು ನುಡಿಗಳು ಬರವಣಿಗೆ, ಕಲಿಕೆ, ನಲ್ಬರಹ (ಸಾಹಿತ್ಯ) ವಲಯಗಳಲ್ಲಿ ಬೆಳೆದು ನಿಂತಿವೆ. ಇನ್ನೂ ಕೆಲವು ನುಡಿಗಳು ಎಶ್ಟು ಬೆಳೆದಿವೆ ಎಂದರೆ ಅವುಗಳನ್ನಾಡಲು/ಅರಿಯಲು ಯಂತ್ರಗಳಿಗೂ ಕಲಿಸಲಾಗುತ್ತಿದೆ.

ಅದೇ ರೀತಿ ಕನ್ನಡವು ಯಾವಯಾವ ವಲಯಗಳಲ್ಲಿ ಬಳಕೆಯಾಗುತ್ತಿದೆ ಎಂಬುದನ್ನು ನೋಡಿದಾಗ, ಮೊದಲ ಹಂತದ ಕಲಿಕೆ, ಸುದ್ದಿಹಾಳೆಗಳು, ಮನರಂಜನೆ ಮತ್ತು ನಲ್ಬರಹ ವಲಯಗಳಲ್ಲಿ ಬಳಕೆಯಲ್ಲಿರುವುದು ಕಾಣುತ್ತದೆ. ಆದರೆ, ಮುಂದುವರೆದ ನಾಡುಗಳೆನಿಸಿಕೊಂಡು ಜಪಾನು, ಜರ‍್ಮನಿ, ಪ್ರಾನ್ಸ್ ಜನರ ನುಡಿಗಳಿಗೆ ಹೋಲಿಸಿದರೆ ಕನ್ನಡವು ಅರಿಮೆ, ಉನ್ನತ ಕಲಿಕೆ, ಅರಕೆ (research) ವಲಯಗಳಲ್ಲಿ ಬಳಕೆಯಲ್ಲಿಲ್ಲದಿರುವುದು ಕಾಣುತ್ತದೆ. ಇವತ್ತಿನ ದಿನ ಕರ‍್ನಾಟಕದಲ್ಲಿ ಎಂಜಿನಿಯರಿಂಗ್ ಅತವಾ ಮೆಡಿಕಲ್ ಓದಬೇಕೆಂದರೆ ಅದು ಇಂಗ್ಲೀಶಿನಲ್ಲಿ ಮಾತ್ರಾ ಸಾದ್ಯವಿದೆ. ಮುಂದುವರೆದ ನಾಡುಗಳಲ್ಲಿ ಇಂತಹ ಏರ‍್ಪಾಡು ಇಲ್ಲ. “ಹಲವಾರು ವಲಯಗಳಲ್ಲಿ ಈಗಾಗಲೇ ಬಳಕೆಯಲ್ಲಿರುವ ಕನ್ನಡವು, ಈ ವಲಯಗಳಲ್ಲಿ ಯಾಕೆ ಬಳಕೆಯಾಗುತ್ತಿಲ್ಲ?” ಎಂಬುದನ್ನು ನೋಡಿದರೆ ಕಾಣುವುದು ಕನ್ನಡದಲ್ಲಿರುವ ಪದಗಳ ಕೊರತೆ. ಹಲವಾರು ಅರಿಮೆಯ ವಿಚಾರಗಳನ್ನು ಹೆಸರಿಸಲು, ಬಣ್ಣಿಸಲು, ಇತರರಿಗೆ ತಿಳಿಯಪಡಿಸಲು ಕನ್ನಡದಲ್ಲಿ ಸಾಕಶ್ಟು ಪದಗಳಿಲ್ಲ. ಇವತ್ತಿನ ದಿನ ಪದಗಳಿಲ್ಲ ಎಂದರೆ ಮುಂದಿನ ದಿನಗಳಲ್ಲೂ ಪದಗಳಿರುವುದಿಲ್ಲ ಎಂದರ‍್ತವಲ್ಲ. ಮುಂದಿನ ದಿನಗಳಲ್ಲಿ ಎಲ್ಲಾ ವಲಯಗಳಲ್ಲೂ ಕನ್ನಡವು ಬಳಕೆಯಾಗುವಂತೆ ಮಾಡಲು ಆಗಬೇಕಿರುವ ಕೆಲಸ, ಕನ್ನಡಕ್ಕೊಂದು ಪದಗಳ ಗಂಟನ್ನು ಕಟ್ಟಿಕೊಡುವುದು. ಹೀಗೆ ಮಾಡುವ ಮೂಲಕ ಮಾತ್ರ ನಾವು ಮುಂದುವರೆದ ನಾಡುಗಳ ಸಾಲಿಗೆ ನಿಲ್ಲಬಲ್ಲೆವು.

ಕನ್ನಡಕ್ಕೆ ಪದಗಳ ಕಟ್ಟಣೆಯ ಅವಶ್ಯಕತೆ, ಮತ್ತು, ಲಿಪಿಸುದಾರಣೆಯ ಅವಶ್ಯಕತೆ ಬಗ್ಗೆ ಮಾತನಾಡಲು ನನಗೆ ಅವಕಾಶ ಒದಗಿಬಂದಿತ್ತು. ಬನವಾಸಿ ಬಳಗ ಪ್ರಕಾಶನವು, ಬೆಂಗಳೂರಿನ ಟೋಟಲ್ ಕನ್ನಡ ಹೊತ್ತಗೆಯಂಗಡಿಯಲ್ಲಿ ಏರ‍್ಪಡಿಸಿದ್ದ “ಕನ್ನಡದಂಗಳದಲ್ಲಿ ತಿಂಗಳ ಮಾತುಕತೆ” ಕಾರ‍್ಯಕ್ರಮದಲ್ಲಿ ನಾನು ಆಡಿದ ಮಾತುಗಳ ವಿಡಿಯೋ ತುಣುಕನ್ನು ಈ ಕೆಳಗೆ ನೀಡಲಾಗಿದೆ. ತಾವೊಮ್ಮೆ ನೋಡಿ, ತಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿರಿ.

ಯೂಟ್ಯೂಬ್ ಕೊಂಡಿhttp://www.youtube.com/watch?v=DQoWfz6hVZ4&list=PLEg0EjnEi4AD4TCSF2Qh4kq89T2wyhMbx

ತುಣುಕು – 1

ತುಣುಕು – 2

(ಚಿತ್ರ ಸೆಲೆ: number27)

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.