ಕನ್ನಡದಲ್ಲಿ ಹೊಸ ಹೆಜ್ಜೆ

– ಸಂದೀಪ್ ಕಂಬಿ.

ಕಳೆದ ಒಂದು ವರುಶದಿಂದ, ಹಿಂದೆಂದೂ ಕನ್ನಡದಲ್ಲಿ ಬರೆಯಲಾಗಿರದ ಅರಿಮೆಯ ಬರಹಗಳು ಹೊನಲಿನಲ್ಲಿ ಮೂಡಿ ಬಂದಿವೆ ಮತ್ತು ಇದರಿಂದ ಓದುಗರಿಗೆ ಹೆಚ್ಚು ಗೊಂದಲಗಳಿಲ್ಲದೆ, ಸುಳುವಾಗಿ ಅರಿಮೆಯ ವಿಶಯಗಳು ತಿಳಿಯುವಂತಾಗಿದೆ. ಇದು ಹಲವು ಓದುಗರೇ ನಮಗೆ ನೇರವಾಗಿ ಹೇಳಿರುವಂತಹ ತಮ್ಮ ಅನಿಸಿಕೆಯ ಮಾತುಗಳು.

ಹೀಗೆ ಹೊಸ ಅರಿವು, ತಿಳಿವುಗಳಲ್ಲಿ, ಕನ್ನಡದಲ್ಲೇ ಮೊದಲ ಹೆಜ್ಜೆಗಳನ್ನಿಡುತ್ತಿರುವ ಹೊನಲಿಗೆ ಈಗ ಒಂದು ವರುಶ ತುಂಬಿದೆ. ನಮ್ಮ ಜೊತೆ ಕಯ್ ಜೋಡಿಸಿ, ತಮ್ಮ ಕೆಲಸಗಳ ನಡುವೆಯೂ ಬಿಡುವು ಮಾಡಿಕೊಂಡು, ಬರಹಗಳನ್ನು ಮಾಡಿ ಕಳಿಸಿದ ನಮ್ಮೆಲ್ಲ ಬರಹಗಾರರಿಗೂ, ನಮ್ಮ ಈ ಪಯಣದಲ್ಲಿ ನಮ್ಮ ಬೆಂಬಲವಾಗಿ ನಿಂತಿರುವ ನಮ್ಮೆಲ್ಲ ಓದುಗರಿಗೂ, ಈ ನಲುಮೆಯ ಹೊತ್ತಿನಲ್ಲಿ ನನ್ನಿಗಳನ್ನು ತಿಳಿಸಲು ಬಯಸುತ್ತೇನೆ. ಕನ್ನಡ ನುಡಿಗೆ ಕಸುವು ತುಂಬಿಸುವ ಈ ಕೆಲಸ ನಿಮ್ಮಲ್ಲಿ ಹಿಗ್ಗು, ಸಂತಸಗಳನ್ನುಂಟು ಮಾಡಿರಬಹುದು. ಆದರೆ ಈ ಹಿಗ್ಗಿನ ಕಾರಣ, ನಿಮ್ಮ ಹೊಣೆಗಾರಿಕೆಯ ಹೊರೆಯೂ ಹವ್ದು. ಬನ್ನಿ, ನೀವೂ ನಮ್ಮೊಂದಿಗೆ ಕಯ್ ಜೋಡಿಸಿ ಈ ಕಟ್ಟಣೆಯ ಕೆಲಸದಲ್ಲಿ ಪಾಲ್ಗೊಳ್ಳಿ.

ಇವುಗಳನ್ನೂ ನೋಡಿ

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.