ಗಜಲ್

ಸಿದ್ದರಾಮ ಹಿರೇಮಟ ಕೂಡ್ಲಿಗಿ

vinalhaven-2011-moonlight-700x700

ಒಲವಿನ ಬಾಣದ ಮೊನೆಯು ಇನ್ನೂ ಚುಚ್ಚುತಿದೆ ಹೇಗೆ ಹೇಳಲಿ ನಿನಗೆ
ತಣ್ಣಗೆ ಉರಿವ ದೀಪವೂ ಬಿಕ್ಕುತ ಕೇಳುತಿದೆ ಹೇಗೆ ಹೇಳಲಿ ನಿನಗೆ

ಕತ್ತಲು ಮುತ್ತುವ ಮುನ್ನ ಪ್ರೀತಿಯ ಬೆಳಕನ್ನಾದರೂ ಸುರಿಸೆಂದು
ಹಿಂಬದಿಯ ನೆರಳೂ ಬೂತವಾಗಿ ಕಾಡುತಿದೆ ಹೇಗೆ ಹೇಳಲಿ ನಿನಗೆ

ಚಯ್‌ತ್ರದ ಚಿಗುರಿನ, ದಣಿಯದ ಕೋಗಿಲೆಯ ದನಿಯ, ಸುರಿವ ಬೆಳದಿಂಗಳಿನ
ನಲುಮೆಯ ಬಾವನೆಯೆಲ್ಲ ತಿವಿದು ಹೇಳುತಿದೆ ಹೇಗೆ ಹೇಳಲಿ ನಿನಗೆ

ತೆಕ್ಕೆಗೊಗ್ಗದ ಚುಕ್ಕೆಯೊಂದು ಕಣ್ಣಾಚೆಗಿದ್ದರೂ ಕಣ್ ಮಿಟುಕಿಸಿ
ಎದೆಯರಾಗ ಹಾಡಿ ತೇಲುತ ಪಿಸುಗುಡುತಿದೆ ಹೇಗೆ ಹೇಳಲಿ ನಿನಗೆ

ಬಾಂದಳದ ಆಚೆಗೆಲ್ಲ ಅಲೆ ಅಲೆಯಾಗಿ ತೇಲುತ ದೂರಕೆ ಸಾಗಿರುವ
ಪ್ರೇಮಗಾನದ ಹೊನಲು ಅನುರಣನಗೊಳುತಿದೆ ಹೇಗೆ ಹೇಳಲಿ ನಿನಗೆ

(ಚಿತ್ರ: buytaert.net)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. ಶಿವಶಂಕರ ಕಡದಿನ್ನಿ says:

    ಬಹಳ ಚೆನ್ನಾಗಿವೆ ಸರ್ ನಿಮ್ಮ ಗಜಲ್ ಓದಿದೆ ನಾನು ನನಗೆ ಬಹಳ ಇಷ್ಟವಾಯಿತು,,,

ಅನಿಸಿಕೆ ಬರೆಯಿರಿ: