ಗೂಗಲ್ ಮ್ಯಾಪಿನಲ್ಲಿ ಊರಿನ ಮಾರ‍್ಪಾಟುಗಳು

 ವಿವೇಕ್ ಶಂಕರ್.

maps

ಒಂದು ಊರು ಇವತ್ತು ಇದ್ದ ಹಾಗೆ ನಾಳೆ ಇರುವುದಿಲ್ಲ, ಊರುಗಳೊಳಗೆ ಹೊತ್ತು ಹೊತ್ತಿಗೂ ಮಾರ‍್ಪಾಟುಗಳು ನಡೆಯುತ್ತವೆ. ಹಲವು ದೂಸರುಗಳಿಂದ ಊರುಗಳೊಳಗೆ ಮಾರ‍್ಪಾಟುಗಳು ನಡೆಯುತ್ತವೆ. ಇಂದಿನ ಪೊಳಲಿಕೆ(urbanization) ಇಲ್ಲವೇ ನೆರೆ, ನೆಲನಡುಕ ಮುಂತಾದ ಹಲವು ಆಗುಹಗಳಿಂದ ಊರಿನೊಳಗೆ ಮಾರ‍್ಪಾಟುಗಳು ನಡೆಯುತ್ತವೆ. ಆದರೆ ಈ ಬೆಳವಣಿಗೆಗಳ ನಂತರ ಒಮ್ಮೊಮ್ಮೆ ನಮ್ಮೂರು ಹಿಂದೆ ಹೇಗಿತ್ತು ಇಲ್ಲವೇ ಇಲ್ಲಿನ ಮಾರ‍್ಪಾಟುಗಳ ಮುಂಚೆ ಹೇಗೆ ಕಾಣುತ್ತಿತ್ತೆಂಬ ಬಯಕೆ ಮಂದಿಯಲ್ಲಿರುತ್ತದೆ. ಈಗ ಗೂಗಲ್ ಮ್ಯಾಪುಗಳು ಈ ಬಯಕೆಯನ್ನು ನೆರವೇರಿಸಿವೆ.

ಗೂಗಲ್ ಮ್ಯಾಪಿನ ಹಲವು ನೋಟಗಳಲ್ಲಿ ಬೀದಿಯ ನೋಟ ಒಂದು. ಇದನ್ನು ಬಳಸಿದರೆ ಊರಿನೊಳಗೆ ಇರುವ, ಅಲ್ಲಿ ಓಡಾಡುವ ಒಂದು ಅನುಬವವನ್ನು ನೀಡುತ್ತದೆ. ಈಗ ಗೂಗಲ್ ಮ್ಯಾಪನ್ನು ನೋಡುವಾಗ ಒಂದು ತುದಿಯಲ್ಲಿ ಒಂದು ಗಡಿಯಾರ ಕಾಣುತ್ತದೆ. ಗಡಿಯಾರವನ್ನು ಒತ್ತಿದ್ದರೆ ಇದೇ ನಾಡತಿಟ್ಟದ(map) ಹಳೆಯ ವರಸೆಗಳು ಹೇಗೆ ಕಾಣುತಿತ್ತು, ಅಂದರೆ ಇದೇ ಊರು ಆ ಹೊತ್ತಿನಲ್ಲಿ ಹೇಗೆ ಕಾಣುತ್ತಿತ್ತು ಎಂದು ಈಗ ನೋಡಬಹುದು, ಹಳೆನೆನಪುಗಳನ್ನು ಮೂಡಿಸುತ್ತವೆ.

ಆದರೆ ಈ ಬೀದಿ ನೋಟಗಳನ್ನು ಎಲ್ಲೆಡೆ ಒಂದೇ ಬಗೆಯಲ್ಲಿ ಮಾಡಿಲ್ಲ. ಯಾಕೆಂದರೆ ಹಲವು ಊರುಗಳಿಗೆ ಗೂಗಲ್ ಅವರ ಬಂಡಿಗಳು ಆಗಾಗ ಹೋಗಿಲ್ಲ ಹಾಗಾಗಿ ಹಲವು ಊರುಗಳ ಒಂದೇ ಬೀದಿ ನೋಟವಿದ್ದರೆ ಕೆಲವು ಊರುಗಳ ಹಲವು ನೋಟಗಳು ಇರುತ್ತವೆ. ನೋಟಗಳು ಹೆಚ್ಚಾದ ಹಾಗೆ ಇದರ ಸಲುವಾಗಿ ತೆಗೆದ ನೆರಳುತಿಟ್ಟಗಳು(photographs) ಹೆಚ್ಚಾಗುವ ಜೊತೆಗೆ ಅವುಗಳನ್ನು ಉಳಿಸಿಕೊಳ್ಳಲು ಹೆಚ್ಚು ಜಾಗ ಬೇಕಾಗುತ್ತದೆ. ಆದರೆ ಈ ಕೊರತೆಯನ್ನು ಒಂದು ಬದಿಗಿಟ್ಟರೆ ಈಗ ನಮ್ಮೂರುಗಳು ಹಿಂದಿನ ಕಾಲದಲ್ಲಿ ಹೇಗೆ ಕಾಣುತ್ತಿದೆಂದು ಈಗ ನೋಡಬಹುದು. ಒಂದು ಎತ್ತುಗೆ, ಬ್ರಜಿಲಿನ ವರ್-ಲ್ಡ್ ಕಪ್ ಆಟದೆಡೆ(stadium) ಈಗ ಹೇಗಿದೆ ಹಾಗೂ ಇದನ್ನು ಕಟ್ಟುವಾಗ ಹಂತ ಹಂತಕ್ಕೂ ಹೇಗೆ ಕಾಣುತ್ತಿತ್ತು ಎಂದು ಕೆಳಗೆ ನೋಡಬಹುದು.

world-cup

(ಮಾಹಿತಿ ಹಾಗು ಚಿತ್ರ ಸೆಲೆ: popsci.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: