ಮಾಡಿ ನೋಡಿ ರುಚಿಯಾದ ನೀರ್ ಪುರಿ
ಬೇಕಾಗುವ ಸಾಮಗ್ರಿಗಳು:
10 ಪುರಿ, ಹುಣಸೆ ಹಣ್ಣಿನ ರಸ, 100 ಗ್ರಾಂ ಬೆಂದ ಹಸಿ ಬಟಾಣಿ, 5 ಆಲೂಗಡ್ಡೆ, ನೀರು, ಹಸಿಮೆಣಸಿನಕಾಯಿ, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು, ಸಕ್ಕರೆ, ಕಾಳುಮೆಣಸಿನ ಪುಡಿ, ಉಪ್ಪು.
ಮಾಡುವ ವಿದಾನ:
1. ಉಪ್ಪು, ಮೆಣಸಿನ ಪುಡಿ, ಆಲೂಗಡ್ಡೆ ಹಾಕಿ ಕಿವುಚಿದ ಮಸಾಲೆಯನ್ನು ಮಾಡಿಕೊಳ್ಳಿ.
2. ಹಸಿಮೆಣಸಿನಕಾಯಿ ಹಾಗೂ ಕೊತ್ತಂಬರಿ ಸೊಪ್ಪು, ಪುದಿನಾಸೊಪ್ಪು ಹಾಕಿ ರುಬ್ಬಿದ ಹಸಿರು ಚಟ್ನಿಗೆ ನೀರು ಉಪ್ಪು ಹಾಕಿ ಹದ ಮಾಡಿದ ಹಸಿರು ಕಾರದ ನೀರನ್ನು ಮಾಡಿಕೊಳ್ಳಿ.
3. ಹುಣಸೆಹಣ್ಣಿನ ರಸ ಹಾಗೂ ಸಕ್ಕರೆ, ಚಿಟಿಕೆ ಕಾಳುಮೆಣಸಿನ ಪುಡಿ ಮತ್ತು ನೀರು ಹಾಕಿ ಹದ ಮಾಡಿದ ಸಿಹಿ ನೀರು ಅತವಾ ನೀರಿಗೆ ಅಂಗಡಿಯಲ್ಲಿ ಸಿಗುವ ಪಾನಿಪುರಿ ಮಸಾಲೆ ಪುಡಿ ಹಾಕಿ ಹದ ಮಾಡಿದ ನೀರನ್ನು ಮಾಡಿಕೊಳ್ಳಿ.
ತಟ್ಟೆಗಳಲ್ಲಿ ಕರಿದ ಪುರಿಯನ್ನು ಸಮವಾಗಿಡಿ. ಪುರಿಯ ಮೇಲ್ಗಡೆ ರಂದ್ರ ಮಾಡಿ ಅದರ ಮೇಲೆ ಆಲೂಗಡ್ಡೆಯ ಮಸಾಲೆ, ಬೆಂದ ಹಸಿ ಬಟಾಣಿ ಹಾಗೂ ಮೊದಲೇ ಮಾಡಿಕೊಂಡ ಹಸಿರು ಕಾರದ ನೀರು ಮತ್ತು ಸಿಹಿ ನೀರನ್ನು ಹಾಕಿ ತಿನ್ನಲು ನೀಡಿ.
ಇತ್ತೀಚಿನ ಅನಿಸಿಕೆಗಳು