ಕಡಲೆಕಾಳು ಉಸಲಿ
ಕಡಲೆಕಾಳು ——- 150ಗ್ರಾಮ್
ಕಾಯಿತುರಿ ——- 1 ಬಟ್ಟಲು
ನಿಂಬೆಹಣ್ಣಿನ ರಸ — 1 ಚಮಚ
ಶುಂಟಿ ———— 1 ಇಂಚು
ಜೀರಿಗೆ ಮೆಣಸು — 7-8 ಅತವ ಹಸಿರು ಮೆಣಸಿನಕಾಯಿ — 4-5
ಎಣ್ಣೆ ————— 3 ಟಿ ಚಮಚ
ಮಾಡುವ ಬಗೆ
ಕಡಲೆಕಾಳನ್ನು ರಾತ್ರಿ ನೆನೆ ಹಾಕಿ (ಬೇಕಾದರೆ ಸಣ್ಣ ಮೊಳಕೆ ಬರಿಸಿ) ನೆಂದ ಕಡಲೆಕಾಳನ್ನು ಕುಕ್ಕರ್ ಗೆ ನೀರು, ಸಲ್ಪ ಉಪ್ಪು ಹಾಕಿ 2 ಸೀಟಿ ಬರಿಸಿ. ಒಂದು ಕಾವಲಿಯಲ್ಲಿ ಎಣ್ಣೆ ಹಾಕಿ ಅದಕ್ಕೆ ಜಜ್ಜಿದ ಶುಂಟಿ ಮತ್ತು ಮೆಣಸು ಹಾಕಿ ಬೆಂದ ಕಾಳನ್ನು ಹಾಕಿ, ನೀರು ಆರುತ್ತಾ ಬರುವಾಗ ಕಾಯಿ ತುರಿ ಹಾಕಿ, ನಿಂಬೆರಸ ಹಾಕಿ ರುಚಿ ನೋಡಿ ಬೇಕಾದರೆ ಸಲ್ಪ ಉಪ್ಪು ಹಾಕಿ ತಿರುಗಿಸಿ ಇಳಿಸಿ. ರುಚಿಯಾದ ಕಡಲೆಕಾಳಿನ ಉಸಲಿ ತಯಾರಾಯಿತು.
ಇತ್ತೀಚಿನ ಅನಿಸಿಕೆಗಳು