ಮನುಜ

ಹರ‍್ಶಿತ್ ಮಂಜುನಾತ್.

 

ತಾನೊಂದ ನೆನೆದೊಡೆ, ದಯ್ವವೊಂದ ಬಗೆವುದು

ತಾನಿತ್ತ ನಡೆದೊಡೆ, ವಿದಿಯತ್ತ ಎಳೆವುದು

ಅತ್ತಿಂದಿತ್ತಿಗೆ ಅಲೆದು ಎಳೆದು ಬಳಲಿ ಬೆಂಡಾಗಿ

ಸತ್ತೆನೋ ಹೊಯ್ ಹೊಯ್ ಎಂದು ಹವ್‍ಹಾರಿಹನು ಮನುಜ

 

ನದಿ ಡೊಂಕಿದ್ದಡೇನು, ಕಡಲತ್ತ ತಳ್ಳದು

ಹಾವು ಡೊಂಕಿದ್ದಡೇನು, ಹುತ್ತವತ್ತ ನೂಕದು

ತಾ ಡೊಂಕಾದೊಡೆ, ಬದುಕೇ ನಿನಗೆ ಸಲ್ಲದು

ನೀ ಲೇಸೆಂದು ಜಗವೊಪ್ಪಿದೊಡೆ, ಚಿರಂಜೀವಿ ಮನುಜ

 

ಅದು ಒಲೆ, ಹೊತ್ತಿ ಉರಿದೊಡೆ ನಿನಗೆಂತು

ಇದು ನೆಲ, ಹೊತ್ತಿ ಉರಿದೊಡೆ ನೀನೆಂತು

ನೀನಾರೆಂದು ನೀನರಿಯದೊಡೆ ನೀನಾರಿಗೆಂತು

ಪಡೆದ ಬದುಕ ಪೊರೆಯದೊಡೆ, ಬಲೆಗೆ ಸಿಕ್ಕಿದ ಮೀನು ಮನುಜ

 

ಮನದೆ ಬಕ್ತಿಸುದೆಯ ತುಂಬಿ ಹರಿಸಿದೊಡೇನು

ಶರೀರವದು ಹೊಲಸುಗಳ ತುಂಬಿ ನಾರುತಿಹುದು ನೋಡು

ಬವಣೆ ಮುಗಿಯದು ನಿನಗೆ ಮದಮೋಹವ ಬಿಡದೊಡೆ

ನೀ ಬಾರದಿರು ನರಕದೆಡೆಗೂ ಎಂದು ತಡೆಯಾದೀತು ಮನುಜ

 

( ಚಿತ್ರಸೆಲೆ: pisciculturaglobal.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. B.M. Nagabhushana says:

    good  With warm personal regardsDr. B.M. Nagabhushana, Professor, Department of Chemistry & Vice president of LSIKC M.S. Ramaiah Institute of Technology (MSRIT) Bangalore- 560054 INDIA Phone No:Office: 080-23600822 (extn:316) M-09916030272

B.M. Nagabhushana ಗೆ ಅನಿಸಿಕೆ ನೀಡಿ Cancel reply