ಕೋಳಿ ಸುಕ್ಕ
ಬೇಕಾಗುವ ಸಾಮಗ್ರಿಗಳು
ಕೋಳಿ —————- 1 ಕೆ.ಜಿ
ನೀರುಳ್ಳಿ ————— 3
ಟೊಮೊಟೊ ———– 2
ಶುಂಟಿ-ಬೆಳ್ಳುಳ್ಳಿ ಪೇಸ್ಟ್ — 1 ಟೀ ಚಮಚ
ಚಕ್ಕೆ—————— 1 ಇಂಚು
ಲವಂಗ ————— 4
ಏಲಕ್ಕಿ —————- 1
ದನಿಯ ಬೀಜ ——— 2 ಟೀ ಚಮಚ
ಮೆಂತೆ ————— 1/4 ಟೀ ಚಮಚ
ಜೀರಿಗೆ ————– 1 ಟೀ ಚಮಚ
ಅಚ್ಚಕಾರದ ಪುಡಿ —– 4 ಟೀ ಚಮಚ
ಕರಿಬೇವಿನ ಸೊಪ್ಪು —- 20 ಎಸಳು
ತೆಂಗಿನ ಕಾಯಿ ——– 1
ಎಣ್ಣೆ —————— 2 ಟೇಬಲ್ ಚಮಚ
ಮಾಡುವ ಬಗೆ
ಒಂದು ಬಾಣಲೆ ಬಿಸಿಗಿಟ್ಟು ಮಂದವಾದ ಉರಿಯಲ್ಲಿ ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ, ಮೆಂತೆ ಹಾಗೂ ದನಿಯ ಬೀಜವನ್ನು ಬೇರೆ ಬೇರೆಯಾಗಿ ಹುರಿದುಕೊಂಡು ಪುಡಿ ಮಾಡಿಕೊಳ್ಳಿ. ದಪ್ಪ ತಳದ ಅಗಲವಾದ ಪಾತ್ರೆ ಬಿಸಿಗಿಟ್ಟು, ಎಣ್ಣೆ ಹಾಕಿ ಕಾದ ನಂತರ ಹೆಚ್ಚಿದ ನೀರುಳ್ಳಿ ಹಾಕಿ ಬಾಡಿಸಿ, ಹೆಚ್ಚಿದ ಟೊಮೋಟೊ ಹಾಕಿ ಬೇಯಿಸಿಕೊಳ್ಳಿ. ಶುಂಟಿ, ಬೆಳ್ಳುಳ್ಳಿ ಪೇಸ್ಟ್ ಹಾಕಿ ಬಾಡಿಸಿ. ಶುಚಿ ಮಾಡಿದ ಕೋಳಿಯನ್ನು ಹಾಕಿ ಉಪ್ಪು ಮತ್ತು ಅರಿಸಿನ ಪುಡಿ ಹಾಕಿ, ಕೋಳಿ ನೀರು ಬಿಟ್ಟು ಆರುತ್ತಾ ಬರುವಾಗ ಕಾರದ ಪುಡಿ, ಪುಡಿ ಮಾಡಿಟ್ಟುಕೊಂಡ ಚಕ್ಕೆ, ಲವಂಗ, ದನಿಯ, ಇವುಗಳ ಮಿಶ್ರಣ ಹಾಕಿದ ನಂತರ ಕರಿಬೇವಿನ ಎಸಳು ಹಾಕಿ ತಿರುಗಿಸಿ. 2 ಲೋಟ (ಮದ್ಯಮ ಗಾತ್ರ) ನೀರನ್ನು ಹಾಕಿ ಮಂದವಾದ ಉರಿಯಲ್ಲಿ ಬೇಯಲು ಬಿಡಿ. ಬಾಣಲೆಯನ್ನು ಬಿಸಿಗಿಟ್ಟು ಸಲ್ಪ ಎಣ್ಣೆ ಹಾಕಿ ತುರಿದ ತೆಂಗಿನಕಾಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಕಾಯಿ ಎಣ್ಣೆ ಬಿಟ್ಟು ಬರುತ್ತದೆ. ಬೆಂದ ಕೋಳಿಗೆ ಕಾಯಿಯನ್ನು ಹಾಕಿ ಚೆನ್ನಾಗಿ ಹುರಿಯಿರಿ. ಕೋಳಿ ಸುಕ್ಕ ತಯಾರಾಯಿತು.
ಇತ್ತೀಚಿನ ಅನಿಸಿಕೆಗಳು