ಪುಟಿದೇಳಲಿ ಕನ್ನಡತನ

– ಕಿರಣ್ ಮಲೆನಾಡು.

puti

ಕನ್ನಡತನದ ಕಿಚ್ಚನು ಹಚ್ಚಿಸೋಣ

ಕನ್ನಡತನದ ಅರಿವನು ಬಡಿದೆಬ್ಬಿಸೋಣ

ಕನ್ನಡತನದ ಕೆಚ್ಚೆದೆಯನು ಇಮ್ಮಡಿಸೋಣ

ಕನ್ನಡತನದ ತಾಳ್ಮೆಯನು ತಾಳಿಸೋಣ

ಕನ್ನಡತನದ ಜಾಣ್ಮೆಯನು ಮೆರೆಯೋಣ

ಕನ್ನಡತನದ ಇಂಪನು ಹಾಡೋಣ

ಕನ್ನಡತನದ ಕಂಪನು ಬೀರೋಣ

ಕನ್ನಡತನದ ಹಿರಿಮೆಯನು ಬೆಳೆಸೋಣ

ಕನ್ನಡತನದ ಕಿರಿಮೆಯನು ಅಳಿಸೋಣ

ಕನ್ನಡತನದ ಸೊಬಗನು ಸವಿಯೋಣ

ಕನ್ನಡತನದ ಸೊಗಡನು ಬಿತ್ತರಿಸೋಣ

ಕನ್ನಡತನದ ಜನಪದವನು ಕುಣಿಸೋಣ

ಕನ್ನಡತನದ ವಯ್ರಿಗಳನು ಹಿಮ್ಮೆಟ್ಟಿಸೋಣ

ಕನ್ನಡತನದ ನಾಡನು ಕಟ್ಟೋಣ

ಕನ್ನಡತನದ ನೆತ್ತರನು ಮೈಗೂಡಿಸಿಕೊಳ್ಳೋಣ

ಕನ್ನಡತನದ ಮಯ್ಯನ್ನು ಹುರಿಗೊಳಿಸೋಣ

(ಚಿತ್ರ ಸೆಲೆ:  ಕಿರಣ್ ಮಲೆನಾಡು )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: