ಮನೆಯಲ್ಲೇ ಮಾಡಿದ ಪಿಜ್ಜಾ

ರೇಶ್ಮಾ ಸುದೀರ್.

Picture 036

ಬೇಕಾಗುವ ವಸ್ತುಗಳು

ಮೈದಾಹಿಟ್ಟು—–250 ಗ್ರಾಮ್
ಯೀಸ್ಟ್————1 ಟಿ ಚಮಚ
ಸಕ್ಕರೆ———1 ಟಿ ಚಮಚ
ಆಲಿವ್ ಎಣ್ಣೆ——-2 ಟಿ ಚಮಚ
ದೊಣ್ಣೆಮೆಣಸು(ಡೊಡ್ದ ಮೆಣಸು)—-2
ನೀರುಳ್ಳಿ——————-1
ಅಣಬೆ——–100 ಗ್ರಾಮ್ಸ್
ಕೋಳಿ (ಮೂಳೆ ತೆಗೆದ)——–100ಗ್ರಾಮ್ಸ್ (ಸಸ್ಯಾಹಾರಿಗಳು ಇದನ್ನು ಹಾಕದಿದ್ದರೆ ಆಯಿತು)
ಗಿಣ್ಣು (ಚೀಸ್)—————– 25 ಗ್ರಾಮ್ಸ್
ಟೊಮೆಟೊ ಸಾಸ್
ಪಿಜ್ಜಾ ಸಿಂಗರಿಸಲು (ಸಿಸನಿಂಗ್)

ಮಾಡುವ ಬಗೆ

ಮೊದಲು ಮೈದಾ ಹಿಟ್ಟನ್ನು ಜರಡಿ ಹಿಡಿದುಕೊಳ್ಳಬೇಕು. ಯೀಸ್ಟ್ ಮತ್ತು ಸಕ್ಕರೆಯನ್ನು ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ಇಡಬೇಕು. ಈ ಮಿಶ್ರಣ ಕರಗುತ್ತಾ ಬರುವಾಗ ಚಮಚದಲ್ಲಿ ಕಲಸಿ, ಮೈದಾ ಹಿಟ್ಟಿಗೆ ಹಾಕಬೇಕು. ಈ ಮಿಶ್ರಣಕ್ಕೆ ಆಲಿವ್ ಎಣ್ಣೆ ಹಾಕಿ ನೀರು ಹಾಕಿಕೊಂಡು ಗಟ್ಟಿಯಾಗಿ ಕಲಸ ಬೇಕು. ಈ ಹಿಟ್ಟನ್ನು ಒಂದು ಬಟ್ಟೆ ಸುತ್ತಿ ಮುಚ್ಚಿ 8 ಗಂಟೆಗಳ ವರೆಗೆ ಇಡಬೇಕು. ಒಂದು ಬಾಣಲೆಯಲ್ಲಿ 2ಟಿ ಚಮಚ ಎಣ್ಣೆ ಹಾಕಿ ಮೊದಲು ಸಣ್ಣಗೆ ಕತ್ತರಿಸಿದ ನೀರುಳ್ಳಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ಬಳಿಕ ದೊಣ್ಣೆಮೆಣಸು, ಅಣಬೆ, ಕೋಳಿ ಹಾಕಿ ಚೆನ್ನಾಗಿ ಬಾಡಿಸಿಕೊಳ್ಳಿ. ರುಚಿಗೆ ತಕ್ಕಹಾಗೆ ಉಪ್ಪು ಹಾಕಿಕೊಳ್ಳಿ. ಕೋಳಿಮಾಂಸ ನೀರು ಬಿಟ್ಟು ಆ ನೀರು ಆರಿದ ನಂತರ ಬೆಂದಿರುತ್ತದೆ. ಅದನ್ನು ಇಳಿಸಿ ಆರಲು ಬಿಡಿ.

ನೀವು ಸಂಜೆ ಪಿಜ್ಜಾ ಮಾಡುವ ಹಾಗಿದ್ದರೆ ಬೆಳಿಗ್ಗೆ ಮೈದಾ ಹಿಟ್ಟು ಕಲಸಿ ಇಟ್ಟಿರಬೇಕು. ಉಬ್ಬಿ ಬಂದ ಹಿಟ್ಟು ತೆಗೆದುಕೊಂಡು ಚಪಾತಿಹಿಟ್ಟಿಗಿಂತ ಸ್ವಲ್ಪ ದೊಡ್ದ ಉಂಡೆ ಮಾಡಿ ಚಪಾತಿಗಿಂತ ಸ್ವಲ್ಪ ಚಿಕ್ಕದಾಗಿ ಲಟ್ಟಿಸಿಕೊಳ್ಳಿ. ನೆನಪಿಡಿ ತುಂಬ ತೆಳ್ಳಗಾಗ ಬಾರದು. ಸ್ವಲ್ಪ ದಪ್ಪ ಇರುವ ಹಿಟ್ಟಿನ ಹಾಳೆಯನ್ನು ಕೈ ಬೆರಳಿಂದ ದೂರ ದೂರಕ್ಕೆ ಒತ್ತಿ (ಗುಂಡಿ). ಈಗ ಈ ಹಾಳೆಗೆ ಟೋಮಟೊ ಸಾಸ್ ಹಚ್ಚಿ.ಅದರ ಮೇಲೆ ಪಲ್ಯದ ಮಿಶ್ರಣ ಹರಡಿ, ಅದರ ಮೇಲೆ ಗಿಣ್ಣು(ಚೀಸ್) ತುರಿದು ಹರಡಿ ಇದರ ಮೇಲೆ ಪಿಜ್ಜಾ ಸಿಂಗರಿಸಲು (ಸೀಸನಿಂಗ್) ಹರಡಿ. ಓವನ್ ಅನ್ನು 170 ಡಿಗ್ರಿ ಸೆಲ್ಸಿಯಸ್ನಲ್ಲಿ 5 ನಿಮಿಶ ಮೊದಲೆ ಬಿಸಿ ಮಾಡಿಕೊಳ್ಳಿ. ಬಿಸಿಯಾದ ನಂತರ ಈ ಪಿಜ್ಜಾವನ್ನು ಒಂದು ಬೆಣ್ಣೆ ಹಾಳೆ(ಬಟರ್ ಪೇಪರ‍್) ಅತವ ಬೇಗಡೆ ಹಾಳೆ (ಪ಼ಾಯಿಲ್ ಪೇಪರ‍್) ಮೇಲಿಟ್ಟು ಒವನ್ ಒಳಗೆ ಇಡಿ. 175 ಡಿಗ್ರಿಯಲ್ಲಿ 20-25 ನಿಮಿಶ ಬೇಯಿಸಿ. ಮನೆಯಲ್ಲೆ ಮಾಡಿದ ಬಿಸಿ ಬಿಸಿ ಪಿಜ್ಜಾ ಸವಿಯಲು ಸಿದ್ದ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: