ಮಲೆನಾಡಿನ ವೀಳ್ಯದೆಲೆ ವೈನ್

ರೇಶ್ಮಾ ಸುದೀರ್.
Wine

ಮಲೆನಾಡಿನ ಮೂಡಿಗೆರೆ ಮತ್ತು ಚಿಕ್ಕಮಗಳೂರು ಬಾಗಗಳಲ್ಲಿ ಮನೆಯಲ್ಲಿಯೇ ವೈನ್ ತಯಾರಿಸಿ ಸವಿಯುವ ಪದ್ದತಿಯಿದೆ. ಬೇರೆ ಬೇರೆ ರೀತಿಯ ವೈನ್ ತಯಾರಿಸುವುದರಲ್ಲಿ ಇಲ್ಲಿನ ಹೆಂಗಳೆಯರು ಎತ್ತಿದ ಕೈ. ವೀಳ್ಯದ ಎಲೆಯಲ್ಲಿಯೂ ವೈನ್ ತಯಾರಿಸಬಹುದು! ಈ ವಿಶೇಶವಾದ ವೈನ್ ತಯಾರಿಸುವ ಬಗೆ ಹೀಗಿದೆ.

ಬೇಕಾಗುವ ವಸ್ತುಗಳು:

ವೀಳ್ಯದೆಲೆ ——50
ಕಾಯಿಸಿ ಆರಿಸಿದ ನೀರು–1.5 ಲೀ
ಸಕ್ಕರೆ———–1 ಕೆ.ಜಿ
ಗೋದಿ———–1 ಹಿಡಿ
ಅಕ್ಕಿ————-1 ಹಿಡಿ
ಯೀಸ್ಟ್———–2-3 ಕಾಳು.

ಮಾಡುವ ಬಗೆ:

ವೀಳ್ಯದೆಲೆಯನ್ನು ಚೆನ್ನಾಗಿ ತೊಳೆದು ನೀರಿಲ್ಲದಂತೆ ಒರೆಸಿಕೊಂಡು ಸಣ್ಣದಾಗಿ ಹೆಚ್ಚಿಕೊಳ್ಳಿ. ಶುಚಿಯಾದ ಜಾಡಿಯಲ್ಲಿ ಹೆಚ್ಚಿದ ವೀಳ್ಯದೆಲೆಯನ್ನು ಹಾಕಿ, ಸಕ್ಕರೆ, ಅಕ್ಕಿ, ಗೋದಿ, ಯೀಸ್ಟ್ ಮತ್ತು ಕಾಯಿಸಿ ಆರಿಸಿದ ನೀರನ್ನು ಹಾಕಿ ಚೆನ್ನಾಗಿ ತಿರುಗಿಸಿ, ಗಟ್ಟಿಯಾಗಿ ಮುಚ್ಚಳವನ್ನು ಮುಚ್ಚಿ 21 ದಿನ ಇಡಿ. ವಾರದಲ್ಲಿ 3-4 ದಿನ ಸೌಟು ಹಾಕಿ ಚೆನ್ನಾಗಿ ತಿರುಗಿಸಿ. 21 ನೆಯ ದಿನ ಸಿದ್ದವಾದ ವೈನ್ ಸೋಸಿ ಶುಚಿಯಾದ ಬಾಟಲಿಯಲ್ಲಿ ತುಂಬಿ ಇಡಿ, ಮನೆಯಲ್ಲಿಯೇ ತಯಾರಿಸಿದ ವೈನ್ ಸವಿಯಲು ಸಿದ್ದ.Categories: ನಡೆ-ನುಡಿ

ಟ್ಯಾಗ್ ಗಳು:, , , , , , , , , ,

ಅನಿಸಿಕೆ ಬರೆಯಿರಿ

Please log in using one of these methods to post your comment:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s