ಆಳ್ವಿಕೆಯಲ್ಲಿ ಬದಲಾವಣೆಗಳಾಗಬೇಕೆ?

ಎಂ.ಸಿ.ಕ್ರಿಶ್ಣೇಗವ್ಡ.
demo

ಜಗತ್ತಿನ ಹಿನ್ನಡವಳಿಯತ್ತ ನೋಡಿದರೆ ಬುಡಕಟ್ಟು, ಅರಸರ ಆಳ್ವಕೆ, ಪಡೆಆಳ್ವಿಕೆ, ಇತ್ತೀಚಿನ ಸೂಳುಗಳಲ್ಲಿ ಮಂದಿ ಆಳ್ವಿಕೆಯ ಬಗೆಗಳನ್ನು ಕಾಣಬಹುದು. 20, 21ನೇ ನೂರೇಡಿನಲ್ಲಿ ಮಂದಿಯ ಒಲವು ಗಳಿಸುತ್ತಿರುವ ಮಂದಿಯಾಳ್ವಿಕೆ (Democracy)ಯನ್ನು ಜಗತ್ತಿನ ಹೆಚ್ಚಿನ ನಾಡುಗಳು ಪಾಲಿಸುತ್ತಿವೆ. ಅಮೇರಿಕ, ಪಡುವಣ ಯೂರೋಪ್ ಮುಂತಾದ ಕಡೆಗಳಲ್ಲಿ ಆರಂಬವಾದ ಈ ಆಳ್ವಿಕೆ 4-5 ಸೂಳುಗಳಿಗೊಮ್ಮೆ ಆಯಾವಳಿ(election)ಮಾಡಿ ಆಯ್ದಾಳುಗಳಿಂದ ಆಳ್ವಿಗಾರ(government)ಗಳನ್ನು ಉಂಟುಮಾಡಿಕೊಳ್ಳಲಾಗುತ್ತಿದೆ.

ಹಿಂದಿನ ಸೂಳುಗಳಲ್ಲಿ ಪೆರ‍್ಚೂಟಿ(machine)ಗಳ ಬಳಕೆ ಕಡಿಮೆ ಇದ್ದದ್ದರಿಂದ, ಏಳಿಗೆ ಕೆಲಸ(ಕಟ್ಟಡ, ದಾರಿ, ಕೆರೆ, ಕಾಲುವೆ) ಮಾಡಿ ಮಂದಿ ಒಲವು ಗಳಿಸಿಕೊಳ್ಳಲು 5 ಸೂಳುಗಳ ಕಟ್ಟುಪಾಡನ್ನು ಮಾಡಿಕೊಳ್ಳಲಾಗಿತ್ತು. ಆದರೆ 20, 21ನೇ ನೂರೇಡಿನಲ್ಲಾದ ಕಯ್ಗಾರಿಕೆ, ಮಾಹಿತಿ ಚಳಕದರಿಮೆ ಹರವಿನಲ್ಲಾದ ದೊಡ್ಡಮಾರ‍್ಪು(revolution)ಗಳಿಂದಾಗಿ ಏಳಿಗೆ ಕೆಲಸ(ಕಟ್ಟಡ, ದಾರಿ, ಕೆರೆ, ಕಾಲುವೆ) ಮಾಡುವುದು ಮೊದಲಿನ ಹಾಗೆ ಹೆಚ್ಚು ಕಾಲ ಹಿಡಿಯುವ ಹಾಗು ತೊಡಕಿನ ಕೆಲಸವಾಗಿ ಉಳಿದಿಲ್ಲ. ಹಾಗಾಗಿ, ಇಡಿಮಂದಿಯ ತಿಳುವಳಿಕೆಯಲ್ಲಿ ದೊಡ್ಡಮಟ್ಟದ ನೆಗೆತ ಉಂಟಾಗಿದೆ.

ಮುಂದುವರಿದು, ಸರಿಯಾಗಿ ಕೆಲಸ ಮಾಡದ “ಮಂದಿಆಯ್ದಾಳು”ಗಳನ್ನು ಹಿಂದಕ್ಕೆ ಕರೆಸಿಕೊಳ್ಳಬೇಕೆಂಬ ಬಗ್ಗೆ ಕೆಲ ಮಂದಿಗುಂಪಿನೊಳಗೆ ಚರ‍್ಚೆ ನಡೆಯುತ್ತಿದೆ. ಈಗಿನ ಏರ‍್ಪಾಡಿನಲ್ಲಿ (system) “ಮಂದಿಆಯ್ದಾಳು”ಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ನಡೆಯು ತೊಡಕಿನದಾಗಿ ಕಾಣುತ್ತಿದೆ. ಇಂತಹ ಹಲ ಆಲೋಚನೆಗಳು ನಡೆಯುತ್ತಿರುವ ಈ ಹೊತ್ತಿನಲ್ಲಿ ಮಂದಿಆಳ್ವಿಕೆಯ ಕಾಲ(term)ವನ್ನು ಬಾರತ ಒಕ್ಕೂಟದಲ್ಲಿ ಹೊರನಾಡುಗಳಲ್ಲಿರುವಂತೆ 4-5 ಸೂಳುಗಳಿಗೊಮ್ಮೆ ಆಯಾವಳಿ ನಡೆಸಬೇಕೆ? ಇಲ್ಲಾ ಒಕ್ಕೂಟ ಸಬೆ(parliament), ನುಡಿನಾಡುಸಬೆ(assembly), ಜಿಲ್ಲೆ ಪಂಚಾಯಿತಿ, ಹಳ್ಳಿ ಪಂಚಾಯಿತಿ, ಕೊಡುಕೊಳೆ ಕೂಟ(cooperative society), ಮತ್ತಿತರ ಆಯ್ದಾಳುಗಳ ಆಳ್ವಿಕೆ ಇರುವೆಡೆಗಳಲ್ಲಿ ಆಳ್ವಿಕೆ ಕಾಲಾವದಿಯನ್ನು ಇಂದಿನ ಹೊತ್ತಿಗೆ ಸರಿಹೊಂದುವಂತೆ ಮಾರ‍್ಪಡಿಸಿಕೊಳ್ಳಬೇಕೆ ಎಂಬುದು ಕೆಲವರ ಕೇಳ್ವಿ.

ಇವುಗಳನ್ನೂ ನೋಡಿ

3 ಅನಿಸಿಕೆಗಳು

  1. sabhe, kaala, kaalaavadhi, panchaayiti ivella kannadakke Samskrutadinda banda padagaLu allava?

  2. ಹೌದು. ಸಂಸ್ಕ್ರುತದಿಂದ ಬಂದ ಪದಗಳು ಅವು.

  3. ಮಂದಿಆಯ್ದಾಳು=Peoples representative>Elected representative
    ಸೂಳು=year

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.