ಬದುಕು ನಾಟಕ

– ಬಸವರಾಜ್ ಕಂಟಿ.

drama-curtain

ಇನ್ನೊಂದು ದಿನ ಮತ್ತೊಂದು ಹಗಲು,
ನಡೆದಿದೆ ಬದುಕಿನ ನಾಟಕ.
ನಿದ್ದೆಯಿಂದೇಳುತ್ತಲೇ ಅಣಿಯಾಗಬೇಕು
ಕತೆ ಮುಂದುವರಿಸಲೇ ಬೇಕಲ್ಲ?

ನಟಿಸುವ ಆಸೆಯೋ, ಅನಿವಾರ‍್ಯವೋ,
ಪಾತ್ರವೇ ತಿಳಿಯದ ಗೊಂದಲವೋ.
ಇಶ್ಟವೋ, ಕಶ್ಟವೋ ಬಿಡದೆ ಸಾಗಿದೆ,
ಅಡೆತಡೆಗಳ ಜೊತೆ ಏಗಿ.

ಅಳುವ ಮರೆಸಿ ನಗುವ ಮೆರೆಸಿ,
ನಟನೆಯಲ್ಲೇ ನಟನೆ!
ಸಂದರ‍್ಬಕ್ಕೆ ತಕ್ಕಂತೆ ಬದಲಾಗುವ,
ನಡೆಸುವವನೇ ಬೆರಗಾಗುಗುವ ನಟನೆ

ಆಗುವುದೆಲ್ಲಾ ಒಳಿತೇ ಎಂದು,
ಆಡಿಸುವವನ ಚಿತ್ತವ ನಂಬಿ,
ತಿರುಳು ತಿಳಿಯದಿದ್ದರೂ ನಡೆದಿದೆ,
ಕೊನೆಯೇ ಅರಿಯದ ಈ ನಟನೆ.

(ಚಿತ್ರ ಸೆಲೆ: ronedmondson.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: