ಹೋಳಿಗೆ ಸಾರು

ಆಶಾ ರಯ್.

holige saaru

 

ಬೇಕಾಗುವ ಸಾಮಗ್ರಿಗಳು:

ಬೇಳೆ ಬೇಯಿಸಿದ ನೀರು : 4 ಲೋಟ
ಟೊಮ್ಯಾಟೋ: 2
ಬೆಳ್ಳುಳ್ಳಿ: 2-3 ಎಸಳು
ಉಪ್ಪು: ರುಚಿಗೆ ತಕ್ಕಶ್ಟು
ಹೋಳಿಗೆ ಹೂರಣ: 2-3 ಚಮಚ / ಬೆಲ್ಲ
ಅರಿಶಿನ: 1 ಚಿಟಿಕೆ
ಸಾರಿನ ಪುಡಿ: 1-1/2 ಚಮಚ
ಹುಣಿಸೆ ರಸ : 1/4 ಲೋಟ
ಎಣ್ಣೆ: 1 ಚಮಚ
ಸಾಸಿವೆ: 1/2 ಚಮಚ
ಜೀರಿಗೆ: 1/4 ಚಮಚ
ಕರಿಬೇವು
ಕೊತ್ತಂಬರಿ ಸೊಪ್ಪು

ಮಾಡುವ ಬಗೆ:

1. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಸಾಸಿವೆ ಜೀರಿಗೆ ಒಗ್ಗರಣೆ ಮಾಡಿ

2. ಬೆಳ್ಳುಳ್ಳಿ , ಕರಿಬೇವು ಹಾಕಿ ಅರ‍್ದ ನಿಮಿಶ ಕರಿಯಿರಿ

3. ಕತ್ತರಿಸಿದ ಟೊಮ್ಯಾಟೋ ಹಾಕಿ 1-2 ನಿಮಿಶ ಬೇಯಿಸಿ

4. ಉಪ್ಪು, ಸಾರಿನ ಪುಡಿ, ಹೋಳಿಗೆ ಹೂರಣ, ಹುಣಿಸೆ ರಸ ಸೇರಿಸಿ ಕುದಿಸಿರಿ.

5. ಬೇಳೆ ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ, ಅನ್ನದೊಂದಿಗೆ ಸವಿಯಿರಿ.

( ಚಿತ್ರ ಸೆಲೆ : ಬರಹಗಾರರ ಆಯ್ಕೆ )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: