ಗಣಪತಿ ಹಬ್ಬಕ್ಕೆ ಹೆಸರುಬೇಳೆ ಪಂಚಕಜ್ಜಾಯ

ಆಶಾ ರಯ್.

image1

ಬೇಕಾಗುವ ಸಾಮಾಗ್ರಿಗಳು:

ಹೆಸರುಬೇಳೆ: 1/2 ಬಟ್ಟಲು
ಬೆಲ್ಲ: 1/4 ಬಟ್ಟಲು
ತೆಂಗಿನಕಾಯಿ ತುರಿ: 1/2 ಬಟ್ಟಲು
ಏಲಕ್ಕಿ ಪುಡಿ: 1/4 ಚಮಚ
ಗೋಡಂಬಿ: 8-10
ತುಪ್ಪ: 1 ದೊಡ್ಡ ಚಮಚ

ಮಾಡುವ ಬಗೆ:
ಒಂದು ಕಡಾಯಿಯಲ್ಲಿ ಹೆಸರುಬೇಳೆಯನ್ನು ಕೆಂಪಗಾಗುವರೆಗೆ ಹುರಿದು, ತಣ್ಣಗಾಗಲು ತೆಗೆದಿಡಿ. ಅದೇ ಕಡಾಯಿಯಲ್ಲಿ 1/2 ಚಮಚ ತುಪ್ಪ ಬಿಸಿ ಮಾಡಿ, ತೆಂಗಿನತುರಿ ಮತ್ತು ಬೆಲ್ಲ ಸೇರಿಸಿ. ಬೆಲ್ಲ ಮತ್ತು ಕಾಯಿ ಸರಿಯಾಗಿ ಬೆರೆತ ಮೇಲೆ, ಏಲಕ್ಕಿ ಪುಡಿ ಮತ್ತು ಹುರಿದ ಹೆಸರು ಬೇಳೆ ಸೇರಿಸಿ. ಉಳಿದ ತುಪ್ಪದಲ್ಲಿ ಗೋಡಂಬಿ ಬೀಜವನ್ನು ಹುರಿದು ಸೇರಿಸಿದರೆ ಪಂಚಕಜ್ಜಾಯ ಸಿದ್ದ. ರುಚಿಯಾದ ಪಂಚಕಜ್ಜಾಯ ಗಣಪನಿಗೆ ಎಡೆ ಇಡಿ.
ಹುರಿದ ಹೆಸರುಬೇಳೆಯನ್ನು ಮಿಕ್ಸರಿನಲ್ಲಿ ಪುಡಿ ಮಾಡಿಯೂ ಹಾಕಬಹುದು.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: