ಪದ ಪದವೆನಲು ಈ ಹದಪದ

ಹರ‍್ಶಿತ್ ಮಂಜುನಾತ್.

attitude

ಪದ ಪದವೆನಲು ಪದ ಪಾಡಿರೆನಲು
ಪದ ಪದವನುಡುಕಿ ಹದ ಮಾಡಿರಲು
ಹದ ಹದದಿ ಕಡಿದು ಪದ ಕಟ್ಟಿರಲು
ಪದ ಹದದಿ ಮಿಡಿದು ಮುದವ ನೀಡಿರಲು
ಪದ ಮುದವು ಬಲು ಇಂಪು ಕಿವಿಗೆ ಕಂಪಿಸಲು

ಜಟ್ಟಿ ಜಗಜಟ್ಟಿ ಜಗಕೆಲ್ಲ ಇವಗಟ್ಟಿ
ಜಟ್ಟಿ ನೊಗಮೆಟ್ಟಿ ಎತ್ತ ಎಳೆದು ಕಟ್ಟಿ
ಮೆಟ್ಟಿ ಕುಟ್ಟಿ ನೆಲವ ಪುಡಿಗಟ್ಟಿ
ಜಟ್ಟಿ ಜಾರಿದ ಬೆಲೆಬಾರದ ಬೆಳೆ ಒಟ್ಟಿ
ಜಟ್ಟಿ ಬರಿಗಟ್ಟಿ ದಿನ ಮುರಿಯಲು ರೊಟ್ಟಿ

ಬರಿ ಹಸಿ ಗೊಂದಲವೆನಲು ಮನ ಕಸಿವಿಸಿ
ಬರಿ ಬಿಸಿ ಬಯಸಿ ಮುಂಗೋಪ ಸೂಸಿ
ಉರಿ ಬೀಸಿ ಬೆಂಕಿ ಮನ ಬೇಡದೆಡೆಗೆ ಈಸಿ
ಬರಿ ಹರಸಿ ಕಳುಹಿದೆಡೆ ಬಿರಿವ ಉರಿ ಹಾಸಿ
ಬರಿ ಗಾಸಿ ಇರದುದ ಬೇಕೆಂದು ಸದಾ ಬಯಸಿ

ಪಾಟ ಇದು ಬದುಕ ಓಟದೊಳಗೊಂದಾಟ
ಪಾಟ ಇದು ಹಟದಿ ಗೆಲ್ಲುವ ಬದುಕಾಟ
ನೋಟ ಪರರಾಟ ಬದುಕು ನಿನ್ನಾಟ
ಪಾಟ ಸಾಗದು ಸೋಲಿನೋಟ ಆದರೆ ಚಟ
ಪಾಟ ಮುಗಿಯದು ಆಟ ಮುಗಿಸಿ ಏರಿದರೂ ಚಟ್ಟ

(ಚಿತ್ರ ಸೆಲೆ: crossfitignitesydney.com.au )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. bkrs setty says:

    ಸಾಹಿತ್ಯ ಸಮೃದ್ಧ. ಕವಿ ಮನ.ನಮನ.

ಅನಿಸಿಕೆ ಬರೆಯಿರಿ: