‘ಅಮ್ಮ’ ಎಂದರೆ ಎಂತ ಆನಂದ ಮನಸಿಗೆ
ಅಮ್ಮ ಎಂದರೆ ಎಂತ ಆನಂದ ಮನಸಿಗೆ
ಆತಂಕ, ಕೇ ಕೇ ಹಾಕುವ ನೋವುಗಳಿಗೆ
ನನ್ನ ಮೊದಲ ಅರಿವಿನ ಸಿರಿ ಅವಳು
ಅವಳಿಂದ ಕಲಿತದ್ದು ಎಂದೂ ಮರೆಯಲಾಗದು
ಎಲ್ಲರನ್ನೂ ಕಾಯುವ ಆ ಶಿವನು
ಅವಳ ಮಮತೆಯನ್ನು ಕಂಡು ಶರಣಾದನು
ಬೂಮಿಯ ಮೇಲೆ ತ್ಯಾಗ ಪ್ರತೀಕ ಅವಳು
ಅವಳಿಗೆ ಸಮಾನರು ಇನ್ಯಾರು?
ಕರುಣೆಯೇ ಅಳಿಸಿದ ಮಾನವ ಲೋಕದಲ್ಲಿ
ಅದನ್ನು ಉಳಿಸಿದ ಕರುಣಾಮಯಿ ಅವಳು
ನನ್ನ ಕಣ್ಣೀರಿಗೆ ಕಣ್ಣೀರಾಗುವವಳು
ನಗುವಿನಲ್ಲಿ ನಗುವಾಗುವವಳು
ತನ್ನ ಜೀವನವೇ ನನಗೆ ಮುಡುಪಾಗಿಡುವವಳು
ನಾ ಕಂಡಿಲ್ಲ ನಿಜವಾದ ದೇವರನ್ನು
ಇರಬಹುದು ಇವಳಂತೆ ಅವನು
ಪ್ರೀತಿಗೆ ಇನ್ನೊಂದು ಹೆಸರು ಅವಳು
ಅವಳ ಪ್ರೀತಿಯ ಪಡೆದ ನಾನು ಪುಣ್ಯವಂತನು
(ಚಿತ್ರ ಸೆಲೆ: penciljammers.com )
ಇತ್ತೀಚಿನ ಅನಿಸಿಕೆಗಳು