ದೂರ ಹೋದೆಯಾ ಗೆಳತಿ…

 ನಾಗರಾಜ್ ಬದ್ರಾ.

broken-heart

ನನ್ನ ಎದೆಯ ಗುಡಿಸಲಿಗೆ
ಪ್ರೀತಿಯ ಸೀರೆಯ ತೊಟ್ಟು ಬಂದವಳೆ,
ಇಂದು ಅದಕ್ಕೆ ಬೆಂಕಿಯ ಇಟ್ಟು ಹೋದೆಯಾ

ಮನದಲ್ಲಿ ಕನಸಿನ ಕೋಟೆಯ ಕಟ್ಟಿದವಳೆ
ಇಂದು ಅದನ್ನೇ ಚಿದ್ರಿಸಿ ಹೋದೆಯಾ

ಪ್ರೇಮ ಲೋಕವ ಸ್ರುಶ್ಟಿಸಿದವಳೆ
ಇಂದು ಬರೀ ನೋವನ್ನು ಉಳಿಸಿ ಹೋದೆಯಾ

ನಂಬಿಕೆಗೆ ರೂಪವ ನೀಡಿದವಳೆ
ಕಡೆಗೆ ಮೋಸಕ್ಕೆ ಹೆಸರಾಗಿ ಹೋದೆಯಾ

ಮುದ್ದಾದ ಮಾತಿನಲ್ಲಿಯೇ ಹ್ರುದಯ ಸೇರಿದವಳೆ
ವಾಸಿಯಾಗದ ಗಾಯವ ಮಾಡಿ ಹೋದೆಯಾ

ಈ ಚೂರಾದ ಹ್ರುದಯದ ಒಂದೇ ಆಸೆ
ಎಂದಿಗೂ ಬಾಡದಿರಲಿ ನಿನ್ನಯ ನಗು

ಗೆಳತಿ, ದೂರ ಹೋಗುವ ಮುನ್ನ
ನೀನಾಡಿದ ನಾಟಕಕ್ಕೆ ಕಾರಣವ ಹೇಳಬಾರದೇ
ನಾ ಹೇಗೆ ಮರೆಯಲಿ ನಿನ್ನ ಎಂದಾದರೂ ತಿಳಿಸಬಾರದೇ

(ಚಿತ್ರ ಸೆಲೆ:  heartbreak-quotes.shtml )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: