ಕಾಲದೇವ ಕರೆಯುವ ತನಕ…

 ಶ್ರೀನಿವಾಸಮೂರ‍್ತಿ ಬಿ.ಜಿ.

maduve

ಕಾಲದೇವ ಕರೆಯುವ ತನಕ
ಒಡಗೂಡಿ ಬಾಳೋಣ ಪ್ರೀತಿಯೆ
ನನ್ನ ಜೊತೆಯಾಗು ಬಾ ಬಾಳ ಬೆಳಕೆ

ನಾ ಕಟ್ಟುವ, ನೀ ಕಟ್ಟಿಸಿಕೊಳ್ಳುವ
ತಾಳಿಯು ನಮ್ಮ ಒಲವಿನ ಬೆಸುಗೆ

ನಾ ಕಟ್ಟಿದರೇನಂತೆ, ನೀ ಕಟ್ಟಿಸಿಕೊಂಡರೇನಂತೆ
ನಿನ್ನೊಳು ನಾನು, ನನ್ನೊಳು ನೀನು
ಇರುವೆವು ಎಂದು ಎಲ್ಲರಿಗೂ
ಸಾರಿ ಹೇಳುವ ಬೆಳಕ ಗುರುತು ಈ ತಾಳಿ

ಏಳಿಗೆಯ ಬೆಳಕನ್ನು ನಾವಿಬ್ಬರು ಪಡೆಯಲು
ಸಂಸಾರದ ಪಯಣದ ಈ ಗುರುತು
ನಿನ್ನ ಬಳಿ ಇದ್ದರೆ ಚೆನ್ನ ಎಂದು ತಿಳಿದು ನಾ ಕಟ್ಟುತ್ತಿರುವೆ
ಮಡದಿಯಾಗಿ ಬಾ ಗೆಳತಿ

( ಚಿತ್ರಸೆಲೆ: kannadaprabha.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: