ನಾ ಕಂಡ ದಿನಗಳವು..!

ಅಜಯ್ ರಾಜ್.

urbanization
ನಾ ಕಂಡ ದಿನಗಳವು
ಬೂರಮೆಯ ತಂಪು ಇಂಪಿನಲಿ
ಶುಬ್ರ ಗಾಳಿಯ ಸುಮದುರ ಕಂಪಿನಲಿ
ಬೆರೆತು, ರಮಿಸಿ, ಓಲಾಡಿದ
ಮದುರ ನೆನಪುಗಳು

ಆಕಾಶದ ಸ್ವಚ್ಚಂದ ಬಿಳುಪಿನಲಿ
ಸಾಲು ಮರಗಳಡಿ ಬುಗುರಿಯಾಡಿಸಿ
ಇದ್ದ ಗೋಲಿಗಳ ಸೋತು ಗೆದ್ದ
ಅಪೂರ‍್ವ ಕ್ಶಣಗಳವು

ನಾ ಕಂಡ ದಿನಗಳವು
ಕಾಡು ಮೇಡುಗಳಲಿ ಅಲೆದಾಡಿ
ಸಿಕ್ಕ ಬಾವಿಗಳಲಿ ಈಜಾಡಿ
ಮೋಜು ಮಾಡಿದ ದಿನಗಳವು

ನಾ ಕಂಡ ದಿನಗಳವು
ಪ್ರಕ್ರುತಿ ದೇವಿಯ ಮಡಿಲಿನ
ಪುಟ್ಟ ಕಂದಮ್ಮಗಳಂತೆ
ಉಯ್ಯಾಲೆಯಲಿ, ಜೋಕಾಲಿಯ
ಬೆಸುಗೆ ಕಂಡ
ನೆನಪಿನ ಬುತ್ತಿಗಳವು

ಆದರೆ ಇಂದು…

ನಾನಿರುವ ದಿನಗಳಿವು
ಎಲ್ಲವೂ ಯಾಂತ್ರಿಕ
ನೆನಪುಗಳು, ವ್ಯಕ್ತಿಗಳು
ಎಲ್ಲರೂ, ಎಲ್ಲವೂ ಕ್ಶಣಿಕ

ಕಟ್ಟಡಗಳು ಹೊಡೆದೋಡಿಸಿವೆ ಮರಗಳನು
ಮನಸ್ಸುಗಳು ಮರೆತಿವೆ ಪರಿಸರ ಪ್ರಜ್ನೆಯನು
ಇದು ಆದುನೀಕರಣದ ಪರಮಾವದಿ
ಪ್ರಸಕ್ತ ಮನುಕುಲದ ದುರ‍್ವಿದಿ

ನಾ ಕಂಡ ದಿನಗಳಲೂ
ನಾನಿರುವ ದಿನಗಳಲೂ
ಇರುವುದೊಂದೆ ಮಹದಾಶೆ
“ಉಸಿರಾಗಲಿ ಪರಿಸರ;ಹಸಿರಾಗಲಿ ಪರಿಸರ”
ಪರಿಸರದ ಜೊತೆ ಜೊತೆಗೆ ಹೊಮ್ಮಲಿ
ಆರೋಗ್ಯಕರ ಜೀವನದ ಬಾವಸ್ವರ

( ಚಿತ್ರ ಸೆಲೆ: emaze.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: