ಮಾಡಿನೋಡಿ ರುಚಿಯಾದ ಸೀಗಡಿಸಾರು
ಬೇಕಾಗುವ ಸಾಮಾಗ್ರಿಗಳು:
ಶುಚಿಮಾಡಿದ ಸೀಗಡಿ — 200ಗ್ರಾಮ್
ಈರುಳ್ಳಿ(ಮದ್ಯಮಗಾತ್ರ) — 2
ಬೆಳ್ಳುಳ್ಳಿ ————- 1 ಗೆಡ್ಡೆ
ತೆಂಗಿನಹಾಲು ——— 1 ಲೋಟ
ಅಚ್ಚಕಾರದಪುಡಿ ——- 4 ಟಿಚಮಚ
ದನಿಯಾಪುಡಿ ——– 1/2 ಟಿಚಮಚ
ಮೆಂತೆ ———— 4 ಕಾಳು
ಜೀರಿಗೆ ———— 1 ಚಿಟಿಕೆ
ಸಾಸಿವೆ ———– 1 ಚಿಟಿಕೆ
ಲಿಂಬೆಹಣ್ಣು ——— 2
ತೆಂಗಿನಎಣ್ಣೆ ——– 2 ಟೇಬಲ್ ಚಮಚ
ಶುಂಟಿ ———– 1/4 ಇಂಚು
ಕರಿಬೇವಿನಎಲೆ —– 10
ಮಾಡುವ ಬಗೆ:
ಒಂದು ಬಾಣಲೆಯಲ್ಲಿ 1 ಟೆಬಲ್ ಚಮಚ ತೆಂಗಿನಎಣ್ಣೆಯನ್ನು ಹಾಕಿ ಎಣ್ಣೆ ಕಾದ ಮೇಲೆ ಹೆಚ್ಚಿಟ್ಟುಕೊಂಡ 1 ಗೆಡ್ಡೆ ಈರುಳ್ಳಿಯನ್ನು ಹಾಕಿ ಕೆಂಬಣ್ಣಬರುವವರೆಗೆ ಹುರಿದು, ಶುಚಿಯಾದ ಸೀಗಡಿಯನ್ನು ಹಾಕಿ. ಉಪ್ಪು ಮತ್ತು ಅರಿಸಿನ ಹಾಕಿ ಅದರಲ್ಲೇ ನೀರು ಬಿಡುತ್ತದೆ ಮುಚ್ಚಳಮುಚ್ಚಿ 4-5 ನಿಮಿಶ ಬೇಯಿಸಿ (ನೆನಪಿಡಿ ಸೀಗಡಿಯನ್ನು ಜಾಸ್ತಿ ಬೇಯಿಸಬಾರದು ಬೆಂಡಾಗಿ ರುಚಿ ಕಳೆದುಕೊಳ್ಳುತ್ತೆ) ಹೆಚ್ಚಿದ ಇನ್ನೊಂದು ಗೆಡ್ಡೆ ಈರುಳ್ಳಿ, ಬೆಳ್ಳುಳ್ಳಿ, ಶುಂಟಿಯೊಂದಿಗೆ ಅಚ್ಚಕಾರದಪುಡಿ, ದನಿಯಾಪುಡಿ ಹುರಿದ ಮೆಂತೆ, ಸಾಸಿವೆ ಮತ್ತು ಜೀರಿಗೆಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ಇನ್ನೊಂದು ಬಾಣಲೆಯಲ್ಲಿ 1 ಟೆಬಲ್ ಚಮಚ ಎಣ್ಣೆಹಾಕಿ, ಎಣ್ಣೆ ಕಾದ ಮೇಲೆ ಕರಿಬೇವಿನಎಲೆಯನ್ನು ಹಾಕಿ ರುಬ್ಬಿಇಟ್ಟುಕೊಂಡ ಕಾರವನ್ನು ಹಾಕಿ ಸಲ್ಪ ಹುರಿಯಿರಿ. ರುಚಿಗೆ ತಕ್ಕಶ್ಟು ಉಪ್ಪು ಮತ್ತು ಲಿಂಬೆಹುಳಿಯನ್ನು ಹಾಕಿ ಕುದಿಸಿ. ತೆಂಗಿನಹಾಲನ್ನು ಹಾಕಿ ಒಂದು ಕುದಿ ಬಂದ ನಂತರ ಬೇಯಿಸಿದ ಸೀಗಡಿಯನ್ನು ಹಾಕಿ ಒಂದೆರಡು ಕುದಿ ಬರಿಸಿ ಇಳಿಸಿ. ಅನ್ನ ಹಾಗು ಅಕ್ಕಿರೊಟ್ಟಿಯೊಂದಿಗೆ ಸೀಗಡಿಸಾರು ರುಚಿಯಾಗಿರುತ್ತದೆ.
ಇತ್ತೀಚಿನ ಅನಿಸಿಕೆಗಳು