ಮನಸ್ಸಿನ ಬಾವನೆಗೆ ಬೆಲೆ ಎಲ್ಲಿಹುದೋ?

– ಪ್ರತಿಬಾ ಶ್ರೀನಿವಾಸ್.

loneliness
ಮನಸ್ಸಿನ ಬಾವನೆಗೆ ಬೆಲೆ ಎಲ್ಲಿಹುದೋ?
ಏಕಾಂಗಿ ಜೀವನದ ನಡೆಯಲ್ಲಿ
ಕಾಮನ ಬಿಲ್ಲಿನಂತಹ ಕನಸುಗಳು
ಮೋಡ ಆವರಿಸಿ ಕಣ್ಮರೆಯಾಗಿದೆ

ಮುಂಗಾರಿನಲ್ಲಿ ಮಳೆ ಬಂದಂತೆ
ಕನಸುಗಳ ಚಿಲುಮೆ ಚಿಮ್ಮಿತು
ಕನಸೆಲ್ಲಾ ನನಸಾಗಿ ನನ್ನ ಬತ್ತಳಿಕೆ ಸೇರದೆ
ಬೂಮಿಯ ಒಡಲಲ್ಲಿ ಇಂಗಿತು

ಕನಸೆಲ್ಲಾ ನನಸಾಗಿಸು ಎಂದೆ ದೇವರಲ್ಲಿ
ಕಾಣದ ದೇವರು ಕನಸುಗಳ ಕದ್ದಿತು
ಇಲ್ಲದ ದೇವರಲ್ಲಿ ಯಾಕೆ ಮೊರೆ ಇಡುವೆ?
ಎಂದು ಪ್ರತಿದ್ವನಿಸಿತು ನನ್ನ ಅಂತರಂಗ

ಒಳ್ಳೆಯವರಿಗೆ ಇದು ಕಾಲವಲ್ಲ
ಕೆಟ್ಟವರೆ ಇಹರು ಇಲ್ಲಿ ಎಲ್ಲಾ
ಕನಸುಗಳು ನನಸಾಗದಿದ್ದರು ಇಲ್ಲೆಲ್ಲರೂ
ಸಂದರ‍್ಬಕ್ಕೆ ತಕ್ಕಂತೆ ಬದುಕ ನಡೆಸುವರು

( ಚಿತ್ರ ಸೆಲೆ: theguardian.com )

ನಿಮಗೆ ಹಿಡಿಸಬಹುದಾದ ಬರಹಗಳು

ನಿಮ್ಮ ಅನಿಸಿಕೆ ನೀಡಿ

Your email address will not be published. Required fields are marked *