ನನ್ನ ಮನೆಯ ಡೈನಿಂಗ್ ಟೇಬಲ್

– ಸುಮುಕ  ಬಾರದ್ವಾಜ್

diningtable
ನನ್ನ ಮನೆಯಲ್ಲಿ ಒಂದು
ಡೈನಿಂಗ್ ಟೇಬಲ್ ಇದೆ
ಅಲ್ಲಿ ಯಾರೂ ಕೂತು
ಊಟ ಮಾಡುವುದಿಲ್ಲ

ಇಂದು ಕೂತು ಊಟ ಮಾಡಬಹುದು
ನಾಳೆ ಕೂತು ಊಟ ಮಾಡಬಹುದು ಎಂದು
ಅಲುಗದೆ ಕಾದುಕುಳಿತಿರುತ್ತದೆ
ಅಮೆರಿಕಾದಲ್ಲಿ ನೆಲೆಸಿರುವ ತನ್ನ ಮಕ್ಕಳು
ಇಂದು ಬಂದಾರು ನಾಳೆ ಬಂದಾರು ಎಂದು
ತಾಯಿ ಕಾದು ಕೂರುವಂತೆ

ಕೂರದಿದ್ದರೂ ಇದಕ್ಕೆ
ಹಣ್ಣಿನ ಬುಟ್ಟಿ ,
ಚೇರುಗಳ ಸಾಂಗತ್ಯ,
ವಾಟರ್ ಜಗ್ಗಿನ ತಂಪು,
ದೂಳಿನ ಬೆಚ್ಚನೆ ಹೊದಿಕೆ
ಇವೆಲ್ಲ ಸಮಾದಾನಕರ ಪ್ರಶಸ್ತಿಯಂತೆ ಇವೆ

ಹುಟ್ಟುಹಬ್ಬಕ್ಕೋ, ದೀಪಾವಳಿಗೂ
ಪೋನು ಮಾಡುವ ಆ ನೆಂಟನಂತೆ
ಇದಕ್ಕೂ ಒಳ್ಳೆ ದಿನ ಇದೆ!
ಅದು ಮನೆಗೆ
ಅಪರೂಪದ ಗೆಳೆಯನೋ, ನೆಂಟರೋ ಬಂದಾಗ
ಅವರನ್ನು ಕೂರಿಸಿ
ಊಟ ಬಡಿಸುವುದಕ್ಕೆ

(ಚಿತ್ರ ಸೆಲೆ: shedhouseplans.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: