ಗುಂಡಣ್ಣನ ಬೆಕ್ಕು
– ಅಂಕುಶ್ ಬಿ.
ಗುಂಡಣ್ಣನಿಗೆ ಮರಿಬೆಕ್ಕೆಂದರೆ ಬಾಳಾ ಇಶ್ಟಾನೆ
ದಿನವೂ ಬೆಕ್ಕಿಗೆ ಕೊಡುತ್ತಿರುತ್ತಾನೆ ಹಾಲು ತುಪ್ಪಾನೆ
ಮರಿಬೆಕ್ಕು ಯಾವಾಗಲು ಸುತ್ತುತಿರುತ್ತೆ ಗುಂಡನ ಕಾಲನ್ನೆ
ಗುಂಡ ಅದಕ್ಕೆ ಮೊಟ್ಟೆ ಕೊಟ್ಟು ಚನ್ನಾಗಿ ಸಾಕ್ತಾನೆ
ಒಂದು ದಿನ ಮರಿಬೆಕ್ಕು ಇಲಿಯನ್ನು ಹಿಡಿದು ತರುತ್ತೆ
ಅದನ್ನು ಕಂಡ ಗುಂಡಣ್ಣನಿಗೆ ಸಿಟ್ಟು ಬರುತ್ತೆ
ಮರಿಬೆಕ್ಕನ್ನು ಹಿಡಿದು ಅದಕ್ಕೆ ಹೊಡೆದು ಬಿಡುತಾನೆ
ಗುಂಡನ ಮೇಲೆ ಕೋಪಿಸಿಕೊಂಡ ಬೆಕ್ಕು ಓಡಿಹೋಗುತ್ತೆ
ಗುಂಡ ಅಮ್ಮನ ಬಳಿ ಅಳುತಾ ಬರುತಾನೆ
ಬೆಕ್ಕಿಗೆ ಹೊಡೆದೆ ಎಂದು ಅಳುತಾ ಹೇಳ್ತಾನೆ
ಅಮ್ಮ ಅವನಿಗೆ ಚಕ್ಕುಲಿ ಕೊಟ್ಟು ಸಮಾದಾನ ಮಾಡ್ತಾರೆ
ಹೊರಗೆ ಹೋಗಿ ಆಡಿ ಬರಲು ಗುಂಡನ ಕಳಿಸ್ತಾರೆ
ಗೆಳೆಯರ ಕೂಡಿ ಗುಂಡ ಕ್ರಿಕೆಟ್ ಆಡ್ತಾನೆ
ಪುಟ್ಟ ಹೊಡೆದ ಚೆಂಡು ಪೊದೆಯಲಿ ಬೀಳುತ್ತೆ
ಗುಂಡ ಚೆಂಡನು ತರಲು ಓಡಿ ಬರುತಾನೆ
ಅಲ್ಲೆ ಇದ್ದ ಮರಿಬೆಕ್ಕನು ಕಂಡು ಪುಳಕಗೊಳುತಾನೆ
ಮುದ್ದಿನ ಬೆಕ್ಕನು ಪ್ರೀತಿಯಿಂದ ಬಳಿಗೆ ಕರಿತಾನೆ
ಗುಂಡನ ಕಂಡ ಮರಿಬೆಕ್ಕಿ ಮಿಯಾವ್ ಎಂದು ಸುಮ್ಮನೆ ಕೂರುತ್ತೆ
ಗುಂಡ ಚೆಂಡನು ತೆಗೆಯಲು ಹೋಗ್ತಾನೆ
ಪೊದೆಯಲಿ ಇದ್ದ ಹಾವೊಂದು ಬುಸ್ ಬುಸ್ ಎನ್ನುತ್ತೆ
ಹಾವನು ಕಂಡ ಗುಂಡ ಬೆಚ್ಚಿ ಬೀಳ್ತಾನೆ
ಚೆಂಡಿನಿಂದ ಸ್ವಲ್ಪ ದೂರ ಸರಿತಾನೆ
ಹತ್ತಿರವಿದ್ದ ಮರಿಯ ಬೆಕ್ಕು ಚಂಗನೆ ಹಾರುತ್ತೆ
ಹಾವಿನ ದಾರಿಗೆ ತಾನು ಅಡ್ಡ ಕೂರುತ್ತೆ
ಗುಂಡನ ಗೆಳೆಯರೆಲ್ಲ ಓಡಿ ಬರುತಾರೆ
ಗೆಳೆಯರ ಗುಂಪನು ಕಂಡ ಹಾವು ಪೊದೆಯಲಿ ಸೇರುತ್ತೆ
ಮರಿಬೆಕ್ಕು ಹಾವು ಕಣ್ಮರೆಯಾಗುವವರೆಗು ಅಲ್ಲೆ ಕಾಯುತ್ತೆ
ಇದನು ಕಂಡ ಗುಂಡನ ಕಣ್ಣಲಿ ನೀರು ತುಂಬುತ್ತೆ
ಮನೆಗೆ ಓಡಿ ಬಂದ ಗುಂಡ ಅಮ್ಮನ ಬಳಿ ಎಲ್ಲಾ ಹೇಳ್ತಾನೆ
ಅಮ್ಮನಿಗೂನು ಬೆಕ್ಕಿನ ಮೇಲೆ ಪ್ರೀತಿ ಹೆಚ್ಚುತ್ತೆ
ಬೆಕ್ಕು ಮೆಲ್ಲನೆ ಹೆಜ್ಜೆಯ ಹಾಕಿ ಮನೆಗೆ ಬರುತ್ತೆ
ಗುಂಡ ಬೆಕ್ಕನು ಎತ್ತಿಕೊಂಡು ತಲೆಯ ಸವರಿ ಮುತ್ತು ಕೊಡುತಾನೆ
( ಚಿತ್ರಸೆಲೆ: play.google.com )
very very cute. loved it