ಕೆಚ್ಚೆದೆಯ ಕಲಿಗಳ ನಾಡು, ಶರಣರ ಬೀಡು ನಮ್ಮ ಕನ್ನಡನಾಡು!

ಕಿರಣ್ ಮಲೆನಾಡು.

namma-kannada-naadu

ಕೆಚ್ಚೆದೆಯ ಕಲಿಗಳ ಎಂಟೆದೆಯ ಬಂಟರ ನಾಡು
ಕಬ್ಬಿಗರ ಶರಣರ ಅರಿಗರ ಹುಟ್ಟಿಸಿದ ನಾಡು
ಮಯೂರ ಪುಲಕೇಶಿ ಬಲ್ಲಾಳ ರಾಯಣ್ಣ ನಾಲ್ವಡಿಗಳ ನಾಡು
ಬಯಲು-ಬೆಟ್ಟ ಹಳ್ಳ-ಕೊಳ್ಳ, ಕಡಲ ಮಡಿಲ ನಾಡು – ಇದು ನಮ್ಮ ಕನ್ನಡನಾಡು

ಹಗೆಗಾರರನ್ನು ಹತ್ತಿಕ್ಕಿದ, ಒಳಿತಿಗಾಗಿ ಕಾಳಗವ ಮಾಡಿದ ನಾಡು
ಅರಿಮೆಯ ಗೂಡು, ಕಲಿಕೆಯ ಬೀಡು, ಚೆಲುವಿನ ನಾಡು
ಆನೆಗಳ ಬೀಡು, ಹಲಹಕ್ಕಿಗಳ ಗೂಡು, ಹುಲಿಯ ನಾಡು
ಕಲೆಗಳ ತವರೂರು, ಕುಣಿದಾಟ, ಜಾನಪದ ಸೊಗಡುಗಳ ನಾಡು – ಇದು ನಮ್ಮ ಕನ್ನಡನಾಡು

ಆಡಳಿತಕ್ಕೆ ಹೆಸರಾಗಿದ್ದ, ಬೇಡಿ ಬಂದವರಿಗೆ ಆಸರೆಯಿತ್ತ ನಾಡು
ರೈತ ಕುಂಬಾರ ಕಮ್ಮಾರ ಬಡಗಿಯಿಂದ ಅರಳಿದ ನಾಡು
ಪಲ್ಲವರು ಚೋಳರು ಬಡಗಣದವರನ್ನು ಹಿಮ್ಮೆಟ್ಟಿಸಿದ ನಾಡು
ನೆಲದ ಚೆಲುವನರಸಿ ಬರುವವರ, ಸುತ್ತಾಡುಗರ ನಲ್ಮೆಯ ನಾಡು – ಇದು ನಮ್ಮ ಕನ್ನಡನಾಡು

(ಚಿತ್ರ ಸೆಲೆ: totalkannada.comthehindu.comcdn3.discoverwildlife.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: