ದರೆಗೆ ದೊಡ್ಡವರು ಸ್ವಾಮಿ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

 

ದರೆಗೆ ದೊಡ್ಡವರು ಸ್ವಾಮಿ
ನಾವ್ ದರೆಗೆ ದೊಡ್ಡವರು

ಹಸಿರ ಹೊತ್ತ ಮರ ಕಡಿಯುವೆವು
ಬಾಗಿಲು, ಮೇಜು, ಕುರ‍್ಚಿ ಮಾಡುವೆವು
ಉಸಿರಾಡಲು ತೊಂದರೆಯಾಗಿ ಹೊಸ ರೋಗಗಳಿಂದಾಗಿ ಸಾಯುವೆವು

ದೇವರೇ ಸ್ಪಶ್ಟಿಸಿದ ಬೆಟ್ಟ-ಗುಡ್ಡ ಕಡಿಯುವೆವು
ಅಲ್ಲಿ ಗುಡಿಯ ಕಟ್ಟಿ ಜಾತಿ ಹೆಸರಲಿ ಹೋರಾಡುವೆವು, ಹೊಡೆದಾಡುವೆವು

ಕುಡಿವ ನೀರಿಗೆ ವಿಶವ ಬೆರೆಸಿ
ಸಾವನ್ನೇ ಹುಡುಕಿ ಪ್ರಾಣ ಬಿಡುವೆವು

ರಸ್ತೆ ಮಾಡುವೆವು
ವೇಗದ ಹೆಸರಲಿ ವೇಗವಾಗಿ ಪ್ರಾಣ ಬಿಡುವೆವು

ಆಗಸ ಎತ್ತರಕ್ಕೆ ಹಾರುವ ಹಕ್ಕಿಯ ಕೂಡಿ ಹಾಕಿ
ಪಂಜರದಲ್ಲಿ ಹಣ್ಣುಹಾಕುವೆವು

ಕಾಡಿನ ಪ್ರಾಣಿಗಳ ಕಬ್ಬಿಣ ಸಲಾಕೆಯಲಿ ಬಂದಿಸಿ
ನನ್ನ ರಕ್ಶಿಸಿ ಎಂಬ ಪಲಕ ಹಾಕುವೆವು

ಹೂವಿನ ಹಾರ ಹಾಕುವೆವು ನಾವ್ ದೇವರಿಗೆ
ಹೂವಿನೊಂದಿಗೆ ವಿಶಕಾರಕ ಪ್ಲಾಸ್ಟಿಕ್ ಸೇರಿಸುವೆವು

ಎಲ್ಲವೂ ನನ್ನದೇ ಎಂಬ ಸ್ವಾರ‍್ತದಲ್ಲಿ ಬದುಕುವೆವು
ಮಾನವತೆಯ ಸಮಾದಿ ಮಾಡಿ ಸಮಾಜಕ್ಕೆ ಮುಗಳನಗೆ ಬೀರುವೆವು

ಬದುಕ ಪ್ರೀತಿಸಿ, ಪ್ರೀತಿ ಹಂಚಿ
ಪ್ರಕ್ರುತಿಗೆ ಗೌರವಿಸಿ ಜೀವಿಸಿದರೆ ಎಶ್ಟು ಚೆನ್ನ

ಸಾರ‍್ತಕವಾಗುವುದು ಆಗ
ತುಳಿದಿದಕ್ಕೆ ಈ ಕನ್ನಡ ಮಣ್ಣ

( ಚಿತ್ರ ಸೆಲೆ:  8list.ph )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: