ಮನತುಂಬಿ ಹರಸಿದಳು ನೋಡಿ

– ಸುರಬಿ ಲತಾ.

ಕೆಂಪು ಅಂಚಿನ ಸೀರೆ
ಮಲ್ಲಿಗೆ ಹೂವಿನ ಮಾಲೆ
ಅಂದದ ಲಕುಮಿಗೆ

ತೊಡಿಸಿರೆ ಕೊರಳಿಗೆ
ಕಾಸಿನ ಸರ, ಮುತ್ತಿನ ಹಾರ
ಸೊಂಟದ ತುಂಬ ಬಂಗಾರ

ಹೊಕ್ಕುಳಲ್ಲಿ ವಜ್ರವಿರಲಿ
ಮೂಗುತಿಯು ಮಿಂಚಲಿ
ಇಟ್ಟರೆ ಹೆಜ್ಜೆ, ಮೊಳಗಲಿ ಗೆಜ್ಜೆ

ಗಲ್ ಗಲ್ ಎಂದಾಗ
ಅವಳಿನಿಯ ಬರಲಾಗ
ಕಾಣಲಿ ಇವಳಂದ ಆಗ

ತವರಿನ ಕಣ್ಣು, ಆಗಲಿ
ಮದುವೆಯ ಹೆಣ್ಣು
ರಾಮ, ಸೀತೆಯ ಜೋಡಿ
ಎಲ್ಲರಿಗೂ ಮಾಡಿತು ಮೋಡಿ

ಹರಸಿರಿ ಮದುಮಕ್ಕಳ
ಸ್ವೀಕರಿಸಿ ಸಿಹಿ ಕವಳ
ದಾರೆ ಎರೆದ ಅವಳಣ್ಣ
ಕಂಡನು ತುಂಬಿದ ಕಣ್ಣ

ಸಾಗಿತು ಮೆಲ್ಲಗೆ ಗಾಡಿ
ಹೊಸ ಎತ್ತುಗಳ ಜೋಡಿ
ತಾಯಿಯ ಕಣ್ಣಿಂದ ಕಣ್ಣೀರ ಕೋಡಿ
ಮನತುಂಬಿ ಹರಸಿದಳು ನೋಡಿ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: