ಮಾಡಿನೋಡಿ ರುಚಿ ರುಚಿಯಾದ ತಾಲಿಪಟ್ಟು

– ಪ್ರತಿಬಾ ಶ್ರೀನಿವಾಸ್.

ಬೇಕಾಗುವ ಸಾಮಾಗ್ರಿಗಳು:

ಗೋದಿಹಿಟ್ಟು – 1/4 ಲೋಟ
ಕಡಲೆಹಿಟ್ಟು – 1/4 ಲೋಟ
ಮೈದಾಹಿಟ್ಟು – 1/4 ಲೋಟ
ಅಕ್ಕಿಹಿಟ್ಟು – 1/4 ಲೋಟ
ಕೊತ್ತಂಬರಿ ಸೊಪ್ಪು – 1/2 ಕಟ್ಟು
ಸಬ್ಬಸಿಗೆ ಸೊಪ್ಪು – 1/2 ಕಟ್ಟು
ಈರುಳ್ಳಿ – 2
ಹಸಿಮೆಣಸಿನ ಕಾಯಿ – 4-5
ಕರಿಬೇವು – 10-15 ಎಸಳು
ಉಪ್ಪು ರುಚಿಗೆ ತಕ್ಕಶ್ಟು

ಮಾಡುವ ಬಗೆ:

ಮೊದಲಿಗೆ ಈರುಳ್ಳಿ, ಹಸಿಮೆಣಸು, ಸಬ್ಬಸಿಗೆಸೊಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವು ಎಲ್ಲವನ್ನು ಸಣ್ಣದಾಗಿ ಹೆಚ್ಚಿಕೊಳ್ಳಬೇಕು. ಬಳಿಕ 4 ರೀತಿಯ ಹಿಟ್ಟಿಗೆ ಉಪ್ಪು, ಹೆಚ್ಚಿಕೊಂಡ ಸಾಮಾಗ್ರಿಗಳನ್ನು ಹಾಕಿ ನೀರು, ಸ್ವಲ್ಪ ಎಣ್ಣೆ ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿಕೊಳ್ಳಬೇಕು. ಬಳಿಕ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿ, ಪೂರಿಯ ರೀತಿಯಲ್ಲಿ ಲಟ್ಟಿಸಬಹುದು ಅತವಾ ಹೋಳಿಗೆ ರೀತಿಯಲ್ಲಿ ತಟ್ಟಿ. ಕಾದ ಕಾವಲಿಮೇಲೆ ಹಾಕಿ ಎರಡು ಕಡೆ ಎಣ್ಚೆ ಹಚ್ಚಿ ಬೇಯಿಸಿದರೆ, ಸಂಜೆಯ ಹೊತ್ತಿಗೆ ಬಿಸಿಬಿಸಿ ಕಾಪಿ ಜೊತೆ ತಾಲಿಪಟ್ಟು ಸವಿಯಲು ಚೆನ್ನಾಗಿರುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: