ಅವನೇ ಸತ್ಯ, ಅವನೇ ನಿತ್ಯ

– ಸುರಬಿ ಲತಾ.

ನನ್ನವರು ತನ್ನವರು ಯಾರಿಲ್ಲ ಇಲ್ಲಿ
ಅಣ್ಣ, ತಮ್ಮ, ಅಕ್ಕ, ತಂಗಿ
ಬಂದು ಬಳಗ ಬೇಕಿಲ್ಲ ನಿನಗ
ಆ ದೇವನೊಬ್ಬನೇ ಮನದೊಳಗ

ಬಿಡು ನೀನು ಬಂದನದ ಮೋಹ
ಪ್ರೀತಿ ಪ್ರೇಮಗಳ ದಾಹ
ಅದರಿಂದ ಸಿಗುವುದು ನೋವು
ಹಣ್ಣಾಗಿಸಿಕೋ ಮನಸಿನ ಮಾವು

ಕಂಡಿದ್ದೆಲ್ಲಾ ಸತ್ಯವಲ್ಲ
ಕಾಣದ್ದೆಲ್ಲಾ ಸುಳ್ಳಲ್ಲ
ಸತ್ಯ ಸುಳ್ಳುಗಳ ನಡುವೆ
ಅರಿವಿನಲಿ ನೀನೊಂದು ಇರುವೆ

ಜಗವ ಮರೆ ಬಂದನಗಳ ತೊರೆ
ಜಗದ್ದೋದ್ದಾರನ ನೀ ನೆನೆ
ಅವನೇ ಸತ್ಯ, ಅವನೇ ನಿತ್ಯ
ಮಿಕ್ಕಿದ್ದೆಲ್ಲವೂ ಮಿತ್ಯ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: