ಮಾಡಿನೋಡಿ ರುಚಿಯಾದ ‘ರೆಕ್ಕೆ ಬಾಡು’

– ಪ್ರೇಮ ಯಶವಂತ.

ರುಚಿ ರುಚಿಯಾದ ರಕ್ಕೆ ಬಾಡು (chicken wings) ಮಾಡುವ ಬಗೆ ಇಲ್ಲಿದೆ ನೋಡಿ.

ಬೇಕಾಗಿರುವ ಅಡಕಗಳು:

ಕೋಳಿ ರಕ್ಕೆಗಳು – 1 ಕೆ.ಜಿ
ಈರುಳ್ಳಿ ಪುಡಿ – 3 ಚಮಚ
ಬೆಳ್ಳುಳ್ಳಿ ಪುಡಿ – 1.5 ಚಮಚ
ಕಾರದ ಪುಡಿ – 2 ಚಮಚ (ಕಾರಕ್ಕೆ ತಕ್ಕಶ್ಟು)
ಕಾಳು ಮೆಣಸಿನ ಪುಡಿ – 1 ಚಮಚ
ಉಪ್ಪು – ರುಚಿಗೆ ತಕ್ಕಶ್ಟು
ಮಯ್ದಾ ಹಿಟ್ಟು – 1/4 ಬಟ್ಟಲು
ಎಣ್ಣೆ – 2-3 ಚಮಚ
ಅಡುಗೆ ಕೊಬ್ಬರಿ ಎಣ್ಣೆ – 2 ದೊಡ್ಡ ಚಮಚ (ಅಡುಗೆ ಎಣ್ಣೆ ಬಳಸಬಹುದು)
ಕಾರದ ಗೊಜ್ಜು (hot sauce) – 4-5 ದೊಡ್ಡ ಚಮಚ
ತಕ್ಕಾಳಿ ಗೊಜ್ಜು (tomato ketchup) – 2 ಚಮಚ (ಆಯ್ಕೆಗೆ ಬಿಟ್ಟಿದ್ದು.)

ಮಾಡುವ ಬಗೆ:

ಒಂದು ಬಟ್ಟಲಿನಲ್ಲಿ ಈ ಅಡಕಗಳನ್ನು ಬೆರೆಸಿಕೊಳ್ಳಿ: ಈರುಳ್ಳಿ ಪುಡಿ, ಬೆಳ್ಳುಳ್ಳಿ ಪುಡಿ, ಕಾರದ ಪುಡಿ ಮತ್ತು ಉಪ್ಪು. ಬೆರೆಸಿದ ಪುಡಿಯನ್ನು ರಕ್ಕೆಗಳಿಗೆ ಸವರಿ, ಹದಿನಯ್ದು ನಿಮಿಶ ಮುಚ್ಚಿಡಿ. ಈ ಹದಿನಯ್ದು ನಿಮಿಶದಲ್ಲಿ ‘ಒವನ್’ ಅನ್ನು 450 ಡಿಗ್ರಿಗೆ ಕಾಯಲು ಅಣಿಗೊಳಿಸಿ & ಮಯ್ದಾ ಹಿಟ್ಟಿಗೆ ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ಉಪ್ಪು ಹಾಕಿ ಬೆರಸಿಕೊಳ್ಳಿ. ಮುಚ್ಚಿಟ್ಟಿದ್ದ ರಕ್ಕೆಗಳನ್ನು ಅಣಿ ಮಾಡಿದ ಮಯ್ದಾ ಹಿಟ್ಟಿನಲ್ಲಿ ಒಮ್ಮೆ ಉರುಳಿಸಿ. ಹೀಗೆ ಅಣಿ ಮಾಡಿದ ಕೋಳಿ ರೆಕ್ಕೆಯನ್ನು ಎಣ್ಣೆ ಸವರಿದ ಒವನ್ ತಟ್ಟೆಯಲ್ಲಿ ಸಾಲಾಗಿ ಜೋಡಿಸಿ. ಒವನ್ 450 ಡಿಗ್ರಿ ತಲುಪಿದ ಮೇಲೆ, ತಟ್ಟೆಯಲ್ಲಿ ಜೋಡಿಸಿಟ್ಟ ರೆಕ್ಕೆಗಳನ್ನು ಒವನ್ನಲ್ಲಿ ಇಡಿ. 20-25 ನಿಮಿಶಗಳ ಬಳಿಕ ರಕ್ಕೆಗಳ ಮಗ್ಗಲನ್ನು ತಿರುವಿ, 15 ನಿಮಿಶ ಬೇಯಲು ಇಡಿ ಅತವ ಕಂದು ಬಣ್ಣ ಬರೋವರೆಗು ಬೇಯಿಸಿ.

ಗೊಜ್ಜನ್ನು ಮಾಡುವ ಬಗೆ: ಒಂದು ಬಾಣಲೆಯಲ್ಲಿ ಕೊಬ್ಬರಿ ಎಣ್ಣೆ ಕಾಯಿಸಿ ಅದಕ್ಕೆ ಕಾರದ ಗೊಜ್ಜು ಮತ್ತು ತಕ್ಕಾಳಿ ಗೊಜ್ಜನ್ನು ಹಾಕಿ 5 ನಿಮಿಶ ಕುದಿಯಲು ಬಿಡಿ. ಸಾಮಾನ್ಯವಾಗಿ ಈ ಗೊಜ್ಜುಗಳಲ್ಲಿ ಉಪ್ಪಿರುತ್ತದೆ. ಉಪ್ಪು ಬೇಕಿದ್ದರಶ್ಟೆ ಬಳಸಿ.

ಬೇಯಿಸಿದ ಕೋಳಿ ರೆಕ್ಕೆಗಳನ್ನು ಗೊಜ್ಜಿನಲ್ಲಿ ಉರುಳಿಸಿ ತೆಗೆದರೆ, ಬಿಸಿ ಬಿಸಿ ರೆಕ್ಕೆ ಬಾಡು ತಿನ್ನಲು ಅಣಿಗೊಳ್ಳುತ್ತದೆ.

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

%d bloggers like this: