ಕೂಗಿ ಹೇಳಲೇ ನಾ ಅವನ ಹೆಸರನೊಮ್ಮೆ?

– ಪೂರ‍್ಣಿಮಾ ಎಮ್ ಪಿರಾಜಿ.

ಕಳ್ಳನಂತೆ ಬಂದು ಹ್ರುದಯ ಬಾಚಿಕೊಂಡು ಹೋದನಲ್ಲ
ಮರಳಿ ನಾ ಕೇಳಲಾಗದೆ ಒಲಿದೆ ಅವನ ಪ್ರೀತಿಗೆ
ತಳಮಳಿಸುತಿದೆ ಮನಸ್ಸು ಹೇಳಲಾಗದೇ ಪ್ರೀತಿ
ಓರೆಗಣ್ಣಿನಲ್ಲಿ ಸಂದೇಶ ಕಳಿಸುವ ರೀತಿ

ಪ್ರೀತಿ ಹೇಳಲು ತವಕಿಸುವ ಅವನ ಬೀತಿ
ನೋಡಲಾಗದು ಅವನ ಪಜೀತಿ
ಯಾಕೋ ಏನೋ ಗೊತ್ತಿಲ್ಲ, ಜೋರಾದ ಎದೆಬಡಿತ
ಅವನು ಸನಿಹ ಬಂದ ಪ್ರತಿಕ್ಶಣ

ಸುಮ್ಮನಿರದ ಮನಸ್ಸು ಕಾಣುತಿದೆ ಕನಸು
ಅವನ ಪ್ರೀತಿ-ಒಲವಿಗಾಗಿ
ಮಾತಿಲ್ಲದ ಕಣ್ಣ ಬಾಶೆಗೆ ಬಾವನೆಗಳ ವಿನಿಮಯ
ಅವನ ಮುದ್ದು ಮೊಗವ ನೆನೆಯುತಾ ಆದೆ ನಾ ತನ್ಮಯ

ಮಿಂಚು ಕೊಂಚ ಮೂಡಿ ಪುಳಕದಲ್ಲಿ ಹ್ರುದಯ
ಹಿಗ್ಗುತಿದೆ ಮನಸ್ಸು ಹೆಚ್ಚುತ್ತಿದೆ ಪ್ರೀತಿಯ ಸೊಗಸು
ವನವಾಸದ ಅನುಬವ ಅವನ ಕಾಣದ ಕ್ಶಣ ಕ್ಶಣ
ತುಡಿತದಲಿ ಮನ ಮಿಡಿಯುತ್ತಿದೆ ಹ್ರುದಯ

ಕೂಗಿ ಹೇಳಲೇ ನಾ ಅವನ ಹೆಸರನೊಮ್ಮೆ?
ಮೊಳಗಲಿ ಏಳು ಸ್ವರಗಳು, ರಾಗ-ತಾಳದಲಿ
ಕಣ್ಣರೆಪ್ಪೆ ಮಿಟುಕಿಸದೇ ಕಣ್ಣತುಂಬ ತುಂಬಿಕೊಳ್ಳುವ
ಹುಚ್ಚು ಆಸೆ ಎಲ್ಲೆ ಮೀರಿತೆನ್ನ

(ಚಿತ್ರ ಸೆಲೆ: pixabay.com)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: