ನೀ ಬರದೇ ಹೋದೆ
– ಸುರಬಿ ಲತಾ.
ಮನ ನೊಂದಿತ್ತು
ನೀ ಹೇಳಿಕೊಟ್ಟ ಸಹನೆಯ ಪಾಟ ನೆನಪಾಯಿತು
ಸಾಂತ್ವನದ ಮಾತಿಗೆ ಮನ ಕಾದಿತ್ತು
ಆದರೇಕೋ ನೀ ಬರದೇ ಹೋದೆ
ನಡಿಗೆಯನ್ನು ಕಲಿಸಿದ ಅಮ್ಮ ನೆನಪಾದಳು
ಜೀವನದ ಪಾಟ ಕಲಿಸಿದ ನಿನ್ನ ನೆನಪು ಕಾಡಿತ್ತು
ತಪ್ಪು ಒಪ್ಪಿಸಬೇಕಿತ್ತು
ಸರಿ ತಿದ್ದಲು ನೀ ಬರದೇ ಹೋದೆ
ಮುಗಿಲು ಕಪ್ಪಾಗಿ ಗುಡುಗು ಆರ‍್ಬಟಿಸಿತ್ತು
ಬಯದ ಚಾಯೆ ಮನವ ಆವರಿಸಿತ್ತು
ಕಂಗಾಲಾದ ಒಡಲ ತಬ್ಬಲು ನೀ ಬರದೇ ಹೋದೆ
ಪದಗಳು ತಾಳ ತಪ್ಪಿತ್ತು
ರಾಗ ತನ್ನ ಹಾದಿ ಮರೆತಿತ್ತು
ದಿಕ್ಕು ತೋರದೇ ಕಂಗಾಲಾದ ಮನಕ್ಕೆ
ದಾರಿ ತೋರಲು ನೀ ಬರದೇ ಹೋದೆ
ಮಾತು ಮೌನಕ್ಕೆ ಜಾರಿತ್ತು
ಕಹಿ ಅನುಬವ ನನ್ನ ನೋಯಿಸಿತ್ತು
ಪ್ರಬಾತ ಕಣ್ಣು ಮುಂದೆ ಬಾ ಎಂದಿತ್ತು
ತಡೆಹಿಡಿಯಲು ನೀ ಬರದೇ ಹೋದೆ
ನಿನ್ನ ಆಗಮನಕ್ಕೆ ಮನ ಕಾದಿದೆ
(ಚಿತ್ರ ಸೆಲೆ: pixabay.com)
Super….
ನನ್ನ ಒಲವಿನ ಗೆಳತಿಯೂ ಸಹ ಇಂತಹ ವಿರಹಕ್ಕೊಳಗಾಗಿ ನನ್ನನ್ನ ಮುಂದೊಂದು ದಿನ ಜ್ಞಾಪಿಸಿಕೊಳ್ಳುವಳೇನೋ ಅನಿಸಿತು..ಸೊಗಸಾದ ಕವನ!
ತುಂಬಾ ಚೆನ್ನಾಗಿದೆ