
oil on canvas painted by artistelayarajamo:+919841170866
ನನ್ನಾಕೆ ಮುಗುಳ್ನಗುತ್ತಾಳೆ…
ನನ್ನಾಕೆ ಮುಗುಳ್ನಗುತ್ತಾಳೆ
ನನ್ನಾಕೆ ಮುಗುಳ್ನಗುತ್ತಾಳೆ
ತುಟಿಯ ಅಂಚಿನಲ್ಲೇ
ಕುಶಿಯ ತೋರುತ್ತ ನಿಲ್ಲುತ್ತಾಳೆ
ಕಾಡಿಗೆಯ ಹಚ್ಚಿದ ಕಣ್ಣಿನಲ್ಲೇ
ಅವಳ ಹಮ್ಮೀರನ ನೋಡಿ ನಾಚುತ್ತಾಳೆ
ತುಂಬಿದ ಹಣೆಯ ಹುಬ್ಬಿನ
ನಡುವಿನಲ್ಲಿರುವ ಸಿಂದೂರದಿಂದ
ಸೂರ್ಯನನ್ನೇ ಮರೆಮಾಚಿಸುತ್ತಾಳೆ
ನಾಚಿಕೆಯಲ್ಲಿ ನಿಂತಲ್ಲೇ ನಿಂತುಕೊಂಡು
ಕಾಲಿನ ಹೆಬ್ಬೆರಳ ತುದಿಯಲ್ಲಿ
ನೆಲವನ್ನು ಗೀಚುತ್ತಾಳೆ
ಹೆಬ್ಬೆರಳು ಗೀಚಿದ ಗೆರೆಗಳ ನೋಡಿ
ಚುಕ್ಕಿ ಇಟ್ಟು ಬರೆದ ರಂಗೋಲಿಗಳೇ ತಲೆಬಾಗಿಸುತ್ತಾವೆ
( ಚಿತ್ರ ಸೆಲೆ: propelsteps.files.wordpress.com )
ಸುಪರ್ ???