ಸಜ್ಜಕದ ಹೋಳಿಗೆ

– ಸವಿತಾ.

ಉತ್ತರ ಕರ‍್ನಾಟಕದ ಕಡೆ ಹಬ್ಬ-ಹುಣ್ಣಿಮೆ-ಅಮಾವಾಸ್ಯೆ ದಿನ ಮಾಡುವ ಸಿಹಿ ಅಡುಗೆ – ಸಜ್ಜಕದ ಹೋಳಿಗೆ.

ಕಣಕ ಮಾಡಲು ಬೇಕಾದ ಪದಾರ‍್ತಗಳು:

  • 1 ಲೋಟ ಚಿರೋಟಿ ರವೆ
  • 1 ಲೋಟ ಗೋದಿ ಹಿಟ್ಟು
  • 1 ಲೋಟ ಮೈದಾ ಹಿಟ್ಟು

ಸ್ವಲ್ಪ ನೀರು ಸೇರಿಸಿ ಚಪಾತಿ ಹಿಟ್ಟಿನಗಿಂತ ಸ್ವಲ್ಪ ತೆಳುವಾಗಿ ಹಿಟ್ಟು ಕಲಸಿ ಒಂದು ತಾಸು ನೆನೆಯಲು ಬಿಡಿ

ಹೂರಣ ಮಾಡಲು ಬೇಕಾದ ಪದಾರ‍್ತಗಳು:

  • 4 ಲೋಟ ನೀರು
  • 2 ಲೋಟ ಬನ್ಸಿರವೆ
  • 2 ಲೋಟ ಬೆಲ್ಲ
  • 4 ಏಲಕ್ಕಿ
  • 2 ಚಮಚ ಗಸಗಸೆ

ಮಾಡುವ ಬಗೆ:

  • ನೀರು ಕಾಯಲು ಇಟ್ಟು, ಬೆಲ್ಲ ಹಾಕಿರಿ
  • ಬೆಲ್ಲ ಕರಗಿ ಒಂದು ಕುದಿ ಬಂದ ನಂತರ ಬನ್ಸಿರವೆ ಹಾಕಿ ಚೆನ್ನಾಗಿ ತಿರುಗಿಸಿ
  • ಬನ್ಸಿರವೆ-ಬೆಲ್ಲದ ಮಿಶ್ರಣ ಸ್ವಲ್ಪ ಗಟ್ಟಿ ಆಗುತ್ತಿರುವಂತೆ ಗ್ಯಾಸ್ ಆರಿಸಿರಿ
  • ಬಿಸಿ ತಗ್ಗಿದ ಮೇಲೆ, ಕೈಗೆ ನೀರು ಹಚ್ಚಿಕೊಂಡು ಬನ್ಸಿರವೆ-ಬೆಲ್ಲದ ಮಿಶ್ರಣಕ್ಕೆ ಏಲಕ್ಕಿ ಪುಡಿ, ಗಸಗಸೆ ಸೇರಿಸಿ, ಚೆನ್ನಾಗಿ ನಾದಿಕೊಂಡು ಹೋಳಿಗೆಗೆ ತುಂಬಲು ಹೂರಣದ ಉಂಡೆ ಮಾಡಿ ಇಟ್ಟುಕೊಳ್ಳಿ.
  • ಕಣಕದ ಹಿಟ್ಟು ಸ್ವಲ್ಪ ತೆಗೆದುಕೊಂಡು ದುಂಡಾಗಿ ಚಪ್ಪಟೆ ಮಾಡಿ ಹೂರಣ ತುಂಬಿ, ಹೋಳಿಗೆ ಲಟ್ಟಿಸಿರಿ.
  • ಕಾದ ತವೆ ಮೇಲೆ ಸ್ವಲ್ಪ ಎಣ್ಣೆ ಹಾಕಿ ಹೋಳಿಗೆಯ ಎರಡೂ ಬದಿ ಬೇಯಿಸಿರಿ.

ಸಜ್ಜಕದ ಹೋಳಿಗೆ ತುಪ್ಪದ ಜೊತೆ ಸವಿಯಿರಿ 🙂

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: