ಜಾತಿಯ ಬೂತ

– ಕೆ.ಚರಣ್ ಕುಮಾರ್ (ಚಾಮರಾಜಪೇಟೆ).

ಕಾಮಕ್ಕೆ ಇಲ್ಲದ ಜಾತಿ
ಪ್ರೀತಿಗೆ ಹುಡುಕುವೆವು ಜಾತಿ

ಸಾವಿಗೆ ಇಲ್ಲದ ಜಾತಿ
ಸಂಸ್ಕಾರದಲ್ಲಿ ಹುಡುಕುವೆವು ಜಾತಿ

ಕ್ರೋದದಲ್ಲಿ ಇಲ್ಲದ ಜಾತಿ
ವಿರೋದಕ್ಕೆ ಹುಡುಕುವೆವು ಜಾತಿ,

ನಗುವಿಗೆ ಇರದ ಜಾತಿ
ನಗಿಸುವವರಲ್ಲಿ ಹುಡುಕುವೆವು ಜಾತಿ

ವ್ಯಕ್ತಿತ್ವದಲ್ಲಿ ಇಲ್ಲದ ಜಾತಿ
ವ್ಯಕ್ತಿಯಲ್ಲಿ ಹುಡುಕುವೆವು ಜಾತಿ

ಹೂವಿಗೆ ಇಲ್ಲದ ಜಾತಿ
ಹೂವು ಸೇರುವ ದೇವರಲ್ಲಿ ಹುಡುಕುವೆವು ಜಾತಿ

ಸಂಗೀತಕ್ಕೆ ಇಲ್ಲದ ಜಾತಿ
ಸಂಗೀತಗಾರರಲ್ಲಿ ಹುಡುಕುವೆವು ಜಾತಿ

ಆಟಕ್ಕೆ ಇಲ್ಲದ ಜಾತಿ
ಆಟಗಾರನಲ್ಲಿ ಹುಡುಕುವೆವು ಜಾತಿ

ಹೋದಾಗಲೇ ದೇಶದಿಂದ ಜಾತಿಯ ಬೂತ
ಸುಂದರವಾಗಿರುತ್ತದೆ ನಮ್ಮ ದೇಶದ ಬವಿಶ್ಯ

(ಚಿತ್ರ ಸೆಲೆ: thelogicalindian.com)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Sandeep Audi says:

    ತುಂಬಾ ಚೆನ್ನಾಗಿದೆ

ಅನಿಸಿಕೆ ಬರೆಯಿರಿ:

Enable Notifications OK No thanks