ಕುರುಕಲು ರವೆ ಸಂಡಿಗೆ
– ಬವಾನಿ ದೇಸಾಯಿ.
ಬೇಕಾಗುವ ಸಾಮಗ್ರಿಗಳು
- ಸಣ್ಣ ರವೆ – ಒಂದು ಕಪ್
- ಜೀರಿಗೆ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಶ್ಟು
- ಹಸಿಮೆಣಸಿನಕಾಯಿ – 2
- ನೀರು – 9 ಕಪ್
ಮಾಡುವ ಬಗೆ
ಒಂದು ದೊಡ್ಡಪಾತ್ರೆಗೆ ಒಂಬತ್ತು ಕಪ್ ನೀರು ಹಾಕಿ, ಜೀರಿಗೆ, ಉಪ್ಪು, ಹಸಿಮೆಣಸಿನಕಾಯಿ ಪೇಸ್ಟ್ ಸೇರಿಸಿ ಐದು ನಿಮಿಶ ಕುದಿಸಿ. ನಂತರ ರವೆ ಹಾಕಿ 25 ನಿಮಿಶಗಳವರೆಗೆ ತಿರುವುತ್ತಾ ಇರಿ. ಇಪ್ಪತ್ತೈದು ನಿಮಿಶಗಳ ನಂತರ, ಸಂಡಿಗೆ ಹಿಟ್ಟು ಸ್ವಲ್ಪ ಆರಿದ ಮೇಲೆ, ಸಂಡಿಗೆಗಳನ್ನು ಸಣ್ಣ ಚಮಚದಿಂದ ತೆಳ್ಳಗೆ ಒಂದು ಪ್ಲಾಸ್ಟಿಕ್ ಕವರ್ ಮೇಲೆ ಹರಡಿ.
ಸಂಡಿಗೆಗಳನ್ನು ಎರಡು ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಿ. ಮನೆಯಲ್ಲೇ ಮಾಡಿದ ಸಂಡಿಗೆಗಳನ್ನು ಎಣ್ಣೆಯಲ್ಲಿ ಕರಿದು ಸವಿಯಿರಿ.
(ಚಿತ್ರ ಸೆಲೆ: ಬವಾನಿ ದೇಸಾಯಿ)
ಇತ್ತೀಚಿನ ಅನಿಸಿಕೆಗಳು