ಹಚ್ಚಿದ (ಚೂಡಾ) ಅವಲಕ್ಕಿ

–  ಸವಿತಾ.

 

Chooda avalakki, ಹಚ್ಚಿದ ಅವಲಕ್ಕಿ, ಚೂಡಾ ಅವಲಕ್ಕಿ,

ಏನೇನು ಬೇಕು?

 • 2 ಲೋಟ ಅತವಾ 1/2 ಕೆ ಜಿ ತೆಳು ಅವಲಕ್ಕಿ
 • 4 ಚಮಚ ಎಣ್ಣೆ
 • 2 ಚಮಚ ಕಡಲೆಬೀಜ
 • 2 ಚಮಚ  ಹುರಿಗಡಲೆ
 • 2 ಚಮಚ ಒಣದ್ರಾಕ್ಶಿ
 • 1 ಚಮಚ ಜೀರಿಗೆ
 • 1 ಚಮಚ ಸಾಸಿವೆ
 • 10 ಚಮಚ ಒಣ ಕೊಬ್ಬರಿ ತುರಿ ಅತವಾ ತೆಳು ಹೋಳುಗಳು
 • 1 ಚಮಚ ಉಪ್ಪು
 • 1/2 ಚಮಚ ಸಕ್ಕರೆ
 • 1/2 ಚಮಚ ಅರಿಶಿಣ
 • 1/2 ಚಮಚ ಇಂಗು
 • 10  ಗೋಡಂಬಿ
 • 2 ಒಣಮೆಣಸಿನಕಾಯಿ
 • 2 ಹಸಿಮೆಣಸಿನಕಾಯಿ
 • 10-15 ಕರಿಬೇವಿನ ಎಸಳು

ಮಾಡುವ ಬಗೆ

 • ತೆಳು ಅವಲಕ್ಕಿಯನ್ನು ಬಿಸಿಲಿನಲ್ಲಿ 4-5 ತಾಸು ಇಟ್ಟು ಒಣಗಿಸಿಕೊಳ್ಳಿ
 • ಒಂದು ಅಗಲ ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಣ್ಣ ಉರಿಯಲ್ಲಿ ಇಟ್ಟು ಒಗ್ಗರಣೆ ಹಾಕಿರಿ
 •  ಮೊದಲು ಸಾಸಿವೆ , ಜೀರಿಗೆ ನಂತರ ಕರಿಬೇವು , ಇಂಗು , ಕತ್ತರಿಸಿದ ಹಸಿ ಮೆಣಸಿನಕಾಯಿ ಹಾಗೂ ಒಣಮೆಣಸಿನಕಾಯಿ ಮುರಿದು ಹಾಕಿ ಕೈಯಾಡಿಸಿ
 • ತೆಳ್ಳಗೆ ಕತ್ತರಿಸಿದ ಒಣ ಕೊಬ್ಬರಿ ಚೂರುಗಳನ್ನು ಅತವಾ ಒಣ ಕೊಬ್ಬರಿ ತುರಿಯನ್ನು ಹಾಕಿ, ಕೈಯಾಡಿಸಿ
 • ಕಡಲೆಬೀಜ , ಹುರಿಗಡಲೆ , ಒಣದ್ರಾಕ್ಶಿ ಮತ್ತು ಗೋಡಂಬಿ ಚೂರು ಮಾಡಿ ಹಾಕಿ ಹುರಿಯಿರಿ.
 • ಕೊನೆಗೆ ಸಕ್ಕರೆ , ಉಪ್ಪು ಮತ್ತು ಅರಿಶಿಣ ಹಾಕಿ ಚೆನ್ನಾಗಿ ಕಲಸಿ ಒಲೆ ಆರಿಸಿ .
 • ನಂತರ ತೆಳು ಅವಲಕ್ಕಿ ಸೇರಿಸಿ ಚೆನ್ನಾಗಿ ಕಲಸಿ ಇಟ್ಟುಕೊಂಡರೆ ಸಂಜೆ ತಿನ್ನಲು ಹಚ್ಚಿದ ಅವಲಕ್ಕಿ/ ಚೂಡಾ ಅವಲಕ್ಕಿ ರೆಡಿ.

ಡಬ್ಬದಲ್ಲಿ ಎತ್ತಿಟ್ಟು, ಯಾವಾಗ ಬೇಕಾದರೂ ತಿನ್ನಬಹುದು 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: