ಎಳ್ಳು ಹೋಳಿಗೆ

– ಸವಿತಾ.
holige, obbattu, sweet, eLLu, ಎಳ್ಳು ಹೋಳಿಗೆ, ಒಬ್ಬಟ್ಟು, ಸಿಹಿಬೇಕಾಗುವ ಸಾಮಾನುಗಳು

(ಕಣಕ ಮಾಡಲು)

  • ಗೋದಿ ಹಿಟ್ಟು – 2 ಬಟ್ಟಲು
  • ಚಿರೋಟಿ ರವೆ – 1/2 ಬಟ್ಟಲು
  • ಮೈದಾ ಹಿಟ್ಟು – 1/2 ಬಟ್ಟಲು
  • ಎಣ್ಣೆ – 1/2 ಬಟ್ಟಲು
  • ಉಪ್ಪು – ಸ್ವಲ್ಪ

(ಹೂರಣ ಮಾಡಲು)

  • ಎಳ್ಳು – 2  1/2 ಬಟ್ಟಲು
  • ಬೆಲ್ಲದ ಪುಡಿ – 2 ಬಟ್ಟಲು
  • ಗಸಗಸೆ – 1/2 ಚಮಚ
  • ಏಲಕ್ಕಿ – 4
  • ಅಕ್ಕಿ ಹಿಟ್ಟು – 1/2 ಬಟ್ಟಲು

ಮಾಡುವ ಬಗೆ

ಹೋಳಿಗೆ ಮಾಡುವುದನ್ನು ಶುರುಮಾಡುವ ಮೊದಲು ಕಣಕ ಮಾಡಿಟ್ಟುಕೊಳ್ಳಬೇಕು. ಗೋದಿ ಹಿಟ್ಟು, ಚಿರೋಟಿ ರವೆ , ಮೈದಾ ಹಿಟ್ಟಿಗೆ ಕಾಯಿಸಿದ ಎಣ್ಣೆ ಸೇರಿಸಿ, ರುಚಿಗೆ ತಕ್ಕಶ್ಟು ಉಪ್ಪು ಹಾಕಿ ಚಪಾತಿ ಹಿಟ್ಟಿನ ಹದಕ್ಕೆ ನೀರು ಹಾಕಿ ಕಲಸಿ. ಕಲಸಿದ ಹಿಟ್ಟನ್ನು ಒಂದು ಗಂಟೆ ನೆನೆಯಲು ಬಿಟ್ಟರೆ ಹೋಳಿಗೆಗೆ ಬೇಕಾದ ಕಣಕ ತಯಾರು.

ಎಳ್ಳನ್ನು ಸ್ವಲ್ಪ ಹುರಿದು, ಪುಡಿ ಮಾಡಿ ಇಟ್ಟುಕೊಳ್ಳಿ. ಅರ‍್ದ ಬಟ್ಟಲು ನೀರು ಬಿಸಿ ಮಾಡಿ ಅದಕ್ಕೆ ಪುಡಿ ಮಾಡಿದ ಬೆಲ್ಲ ಸೇರಿಸಿ ಕರಗಿಸಿ. ಏಲಕ್ಕಿಯನ್ನು ಪುಡಿ ಮಾಡಿ, ಗಸಗಸೆ ಮತ್ತು ಎಳ್ಳಿನ ಪುಡಿ ಸೇರಿಸಿ ಹೂರಣ ಮಾಡಿ ಇಟ್ಟುಕೊಳ್ಳಿ. ಕಣಕದ ಹಿಟ್ಟನ್ನು ಲಟ್ಟಿಸಿ, ಅದಕ್ಕೆ ಹೂರಣ ತುಂಬಿ. ಮೇಲೆ ಸ್ವಲ್ಪ ಅಕ್ಕಿಹಿಟ್ಟು ಹಚ್ಚಿ ಮತ್ತೆ ಲಟ್ಟಿಸಿಕೊಳ್ಳಿ. ಕಾದ ತವೆಯ ಮೇಲೆ ಎರಡೂ ಬದಿ ಬೇಯಿಸಿರಿ. ರುಚಿಯಾದ ಎಳ್ಳು ಹೋಳಿಗೆ ಸವಿಯಲು ತಯಾರು 🙂

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: