ಸಾಸಿವೆ ಮಾವಿನ ಹಣ್ಣಿನ ನೀರುಗೊಜ್ಜು
– ಕಲ್ಪನಾ ಹೆಗಡೆ.
ಏನೇನು ಬೇಕು?
6 ಸಾಸಿವೆ ಮಾವಿನ ಹಣ್ಣು
4 ಲೋಟ ನೀರು
3 ಚಮಚ ಸಕ್ಕರೆ ಅತವಾ ಬೆಲ್ಲ
ರುಚಿಗೆ ತಕ್ಕಶ್ಟು ಉಪ್ಪು
ಒಗ್ಗರಣೆಗೆ 2 ಚಮಚ ಎಣ್ಣೆ, ಸಾಸಿವೆ, ಎಳ್ಳು, 2 ಒಣಮೆಣಸಿನ ಕಾಯಿ
ಮಾಡೋದು ಹೇಗೆ?
ಮೊದಲು ಒಂದು ಪಾತ್ರೆಯಲ್ಲಿ ಮಾವಿನಹಣ್ಣನ್ನು ಚೆನ್ನಾಗಿ ತೊಳೆದುಕೊಂಡು, ಸಿಪ್ಪೆಯನ್ನು ತೆಗೆದು ಬೆಲ್ಲ ಅತವಾ ಸಕ್ಕರೆ ಹಾಕಿ ಚೆನ್ನಾಗಿ ಕಿವುಚಿಕೊಳ್ಳಿ. ಬಳಿಕ ನೀರು ಹಾಗೂ ರುಚಿಗೆ ತಕ್ಕಶ್ಟು ಉಪ್ಪನ್ನು ಹಾಕಿ ಸೌಟಿನಿಂದ ಕಲಸಿಕೊಳ್ಳಿ. ಆಮೇಲೆ ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಸಾಸಿವೆ, ಮೆಣಸಿನಕಾಯಿ, ಎಳ್ಳು ಹಾಕಿ ಒಗ್ಗರಣೆ ಮಾಡಿ ಕಲಸಿಟ್ಟ ಮಾವಿನಹಣ್ಣಿಗೆ ಹಾಕಿ ಅಶ್ಟೆ. ನೀವು ತಯಾರಿಸಿದ ಮಾವಿನ ಹಣ್ಣಿನ ನೀರುಗೊಜ್ಜನ್ನು ಅನ್ನದೊಂದಿಗೆ ಸವಿಯಬಹುದು ಅತವಾ ಹಾಗೆಯೇ ಕುಡಿಯಬಹುದು.
(ಚಿತ್ರ ಸೆಲೆ: ಕಲ್ಪನಾ ಹೆಗಡೆ)
ಇತ್ತೀಚಿನ ಅನಿಸಿಕೆಗಳು