ಮಾಡಿ ಸವಿಯಿರಿ – ರವೆ ಉಂಡೆ

– ಸವಿತಾ.

ಏನೇನು ಬೇಕು?

  • ಬಾಂಬೆ ರವೆ – 1 ಬಟ್ಟಲು
  • ತುಪ್ಪ – 1/2 ಇಲ್ಲವೇ 3/4 ಬಟ್ಟಲು
  • ಸಕ್ಕರೆ – 1 1/4 ( ಒಂದು ಕಾಲು) ಬಟ್ಟಲು
  • ಒಣ ದ್ರಾಕ್ಶಿ – 10
  • ಗೋಡಂಬಿ -10
  • ಏಲಕ್ಕಿ – 2

ಮಾಡುವ ಬಗೆ

ಕಾಲು ಬಟ್ಟಲು ತುಪ್ಪ ಬಿಸಿಮಾಡಿ, ರವೆ ಸೇರಿಸಿ ಸಣ್ಣ ಉರಿಯಲ್ಲಿ ಹುರಿದು ತೆಗೆದಿಡಿ. ಒಂದು ಬಾಣಲೆಯಲ್ಲಿ ಸಕ್ಕರೆ ಮತ್ತು ಅರ‍್ದ ಬಟ್ಟಲು ನೀರು ಹಾಕಿ ಕುದಿಸಿ ಎಳೆ ಪಾಕ ತಯಾರಿಸಿ. ನಂತರ ರವೆ, ತುಪ್ಪ ಹಾಕಿ ಚೆನ್ನಾಗಿ ಕಲಸಿ, ಒಲೆ ಆರಿಸಿ.

ಏಲಕ್ಕಿ ಪುಡಿ ಮಾಡಿ ಹಾಕಿ ಅರ‍್ದ ಗಂಟೆ ಬಿಟ್ಟು, ಇನ್ನೊಮ್ಮೆ ಚೆನ್ನಾಗಿ ಕೈ ಯಿಂದ ತಿಕ್ಕಿ. ದ್ರಾಕ್ಶಿ ಗೋಡಂಬಿ ಸೇರಿಸಿ ಉಂಡೆ ಕಟ್ಟಿ ಇಟ್ಟುಕೊಂಡರೆ ರವೆ ಉಂಡೆ ಸವಿಯಲು ತಯಾರು.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: