ಸಿಹಿ ಪ್ರಿಯರಿಗೆ ಡಾಣಿ ಉಂಡಿ(ಡೆ)
– ಸವಿತಾ.
ಏನೇನು ಬೇಕು?
- 2 ಬಟ್ಟಲು ಡಾಣಿ
- 1 ಬಟ್ಟಲು ಬೆಲ್ಲ
- 2 ಏಲಕ್ಕಿ
- 1 ಚಮಚ ಗಸಗಸೆ
- 4 ಚಮಚ ಹುರಿಗಡಲೆ ಪುಡಿ
ಮಾಡುವ ಬಗೆ
- ಕಡಲೆ ಹಿಟ್ಟು, ಸ್ವಲ್ಪ ಉಪ್ಪು, ಸ್ವಲ್ಪ ಅಡುಗೆ ಸೋಡಾ ಮತ್ತು ಸ್ವಲ್ಪ ನೀರು ಬೆರೆಸಿ ಬೋಂಡಾ ಹಿಟ್ಟಿಗಿಂತ ಸ್ವಲ್ಪ ಗಟ್ಟಿ ಇರುವಂತ ನಾದಿಕೊಳ್ಳಿ.
- ಚಕ್ಕುಲಿ ಒರಳಿಗೆ ಹಾಕಿ ತಿರುಗಿಸಿ, ಕಾದ ಎಣ್ಣೆಯಲ್ಲಿ ಬಿಟ್ಟು ಕರಿದು ತೆಗೆಯಿರಿ. ಈಗ ಡಾಣಿ ತಯಾರು. ಈ ಸಪ್ಪೆ ಡಾಣಿ ಒಂದು ಕಡೆ ಇಟ್ಟುಕೊಳ್ಳಿ.
- ಬೆಲ್ಲ ಮತ್ತು ಕಾಲು ಬಟ್ಟಲು ನೀರು ಸೇರಿಸಿ ಏರು ಪಾಕ ಮಾಡಿ
- ಡಾಣಿ, ಹುರಿಗಡಲೆ ಪುಡಿ, ಏಲಕ್ಕಿ ಪುಡಿ, ಗಸಗಸೆ ಸೇರಿಸಿ ಒಂದೊಂದೇ ಉಂಡಿಯಾಗಿ ಕಟ್ಟಿ.
ರುಚಿಯಾದ ಡಾಣಿ ಉಂಡಿ ಸವಿಯಿರಿ 🙂
ಇತ್ತೀಚಿನ ಅನಿಸಿಕೆಗಳು