ಕವನ – ‘ಪ್ರಾಣಪಕ್ಶಿ’

– ಬರತ್ ರಾಜ್. ಕೆ. ಪೆರ‍್ಡೂರು.

ಪ್ರಾಣ ಪಕ್ಷಿ

ಹೊತ್ತು ಮುಳುಗುವ ಸಮಯದಿ
ಬವಬಂದನದ ಪಂಜರದಿ
ಮುಕ್ತಗೊಂಡಿತೀ ಪ್ರಾಣಪಕ್ಶಿ!
ಅಳುತ್ತಿದೆ ಆತ್ಮ
ಬಂದನದ ಬೇಗುದಿಯಲ್ಲಿ ಬೆಂದು
ಮೋಕ್ಶ ಬಯಸಿ
ಕಳೆದ ವ್ಯರ‍್ತ ಜೀವನ ನೆನೆದು

ಕುಳಿತಲ್ಲಿ ಊಟ,
ಯಾರನ್ನೋ ಮೆಚ್ಚಿಸಲು ಆಟ,
ಮೆಣಸು ತಿಂದು ಕೂಡ ನಕ್ಕ ಪಾಟ,
ಸಂಸಾರ ಪಂಜರದೀ ಬಂದಿಯಾಗಿ
ಕಲಿತದ್ದೇನು..?
ಗಳಿಸಿದ್ದೇನು..?

ನೀ ಹುಟ್ಟಿದ್ದು ಪಂಜರದ ಗಿಳಿಯಾಗಿ
ಅನ್ಯರ ಮೆಚ್ಚಿಸುತ್ತಾ ಸಾಗಿ,
ಕೊನೆಗೊಂದು ದಿನ ಮಾಗಿ
ಸಾಯಲು ಅಲ್ಲ!

ಬದುಕಿದಶ್ಟು ದಿನ ಸ್ವಚ್ಚಂದವಾಗಿ ಹಾರಿ,
ನಾಕು ಜನಕ್ಕಾಗಿ ಬದುಕಿ,
ಗಳಿಸಿ ಕೂಡಿಟ್ಟು ಕುಳಿತು ತಿನ್ನುವ ಬದಲು,
ಬೇದ-ಬಾವ ಅಳಿಸಿ, ಒಳಿತು ಮಾಡಿ
ಕಲಿತು ಸಾಗು ಪರಂದಾಮದೊಳಗೊಂದು
ನಕ್ಶತ್ರವಾಗಿ ಮಿನುಗು!

( ಚಿತ್ರ ಸೆಲೆ: clipartxtras.com )

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. Veeresh k s says:

    ತುಂಬಾ ಚೆನ್ನಾಗಿದೆ …..

Veeresh k s ಗೆ ಅನಿಸಿಕೆ ನೀಡಿ Cancel reply

%d bloggers like this: