ಪ್ರಾರ‍್ತನೆ, Prayer

ಕವಿತೆ: ಪ್ರಾರ‍್ತನೆ

– ವೆಂಕಟೇಶ ಚಾಗಿ.

ಪ್ರಾರ‍್ತನೆ, Prayer

ಮತ್ತೆ ಮತ್ತೆ ಬಯಸುತಿದೆ ಮನ
ನನ್ನ ಮನದ ಮಲ್ಲಿಗೆ ಸುಮಗಳೇ
ನಿಮ್ಮ ಪ್ರೀತಿ ಅಬಿಮಾನವೇ ಹೊರತು
ತೋರದಿರಿ ಮತ್ಸರವ ಮನದೊಳಗಿದ್ದು

ಮೌನದಲಿ ಹುಸಿ ಮಾತಿನಲಿ
ಮತ್ತೇನೋ ಹೇಳಲು ಬಯಸಿದಿರಿ
ಹೇಳಿಬಿಡಿ ಜರಿದುಬಿಡಿ ಮತ್ತೆ ಮರೆತುಬಿಡಿ
ಆದರೆ ಬಿಟ್ಟು ಬಿಡಿ ಮತ್ಸರವ ಇಂದು

ಜೀವನದ ದಿನಗಳು ಕಳೆಯುತಿವೆ
ಕ್ಶಣ ಕ್ಶಣದಿ ನಮ್ಮ ನಿಮ್ಮ ಅವದಿ
ಪ್ರೀತಿ ಸ್ನೇಹದ ಕುರುಹು ಉಳಿದು
ಕುಶಿ ತರಲಿ ಬದುಕು ಮತ್ಸರವ ಕಳೆದು

ಹಗಲಿಗೆ ಇರುಳು ದರೆಗೆ ಸೂರ‍್ಯ
ನಿಮಗೆ ನಾನು ನನಗೆ ನೀವು
ಮರೆತು ಬಿಡಲು ಬೇಕೆ ಕಾರಣ
ಪ್ರೀತಿ ಹರಿಸಿ ಬದುಕೇ ಹೂರಣ

(ಚಿತ್ರ ಸೆಲೆ: wikihow )

ಅನಿಸಿಕೆ ಬರೆಯಿರಿ:

This site uses Akismet to reduce spam. Learn how your comment data is processed.

%d bloggers like this: