ಕವಿತೆ: ಪ್ರಾರ‍್ತನೆ
– ವೆಂಕಟೇಶ ಚಾಗಿ.
ಮತ್ತೆ ಮತ್ತೆ ಬಯಸುತಿದೆ ಮನ
ನನ್ನ ಮನದ ಮಲ್ಲಿಗೆ ಸುಮಗಳೇ
ನಿಮ್ಮ ಪ್ರೀತಿ ಅಬಿಮಾನವೇ ಹೊರತು
ತೋರದಿರಿ ಮತ್ಸರವ ಮನದೊಳಗಿದ್ದು
ಮೌನದಲಿ ಹುಸಿ ಮಾತಿನಲಿ
ಮತ್ತೇನೋ ಹೇಳಲು ಬಯಸಿದಿರಿ
ಹೇಳಿಬಿಡಿ ಜರಿದುಬಿಡಿ ಮತ್ತೆ ಮರೆತುಬಿಡಿ
ಆದರೆ ಬಿಟ್ಟು ಬಿಡಿ ಮತ್ಸರವ ಇಂದು
ಜೀವನದ ದಿನಗಳು ಕಳೆಯುತಿವೆ
ಕ್ಶಣ ಕ್ಶಣದಿ ನಮ್ಮ ನಿಮ್ಮ ಅವದಿ
ಪ್ರೀತಿ ಸ್ನೇಹದ ಕುರುಹು ಉಳಿದು
ಕುಶಿ ತರಲಿ ಬದುಕು ಮತ್ಸರವ ಕಳೆದು
ಹಗಲಿಗೆ ಇರುಳು ದರೆಗೆ ಸೂರ‍್ಯ
ನಿಮಗೆ ನಾನು ನನಗೆ ನೀವು
ಮರೆತು ಬಿಡಲು ಬೇಕೆ ಕಾರಣ
ಪ್ರೀತಿ ಹರಿಸಿ ಬದುಕೇ ಹೂರಣ
(ಚಿತ್ರ ಸೆಲೆ: wikihow )
ಇತ್ತೀಚಿನ ಅನಿಸಿಕೆಗಳು