ಗೆಣಸಿನ ಪಾಯಸ

– ಸವಿತಾ.

ಗೆಣಸಿನ ಪಾಯಸ, Genasina Payasa

ಬೇಕಾಗುವ ಪದಾರ‍್ತಗಳು:

2 ಗೆಣಸು
8 ಚಮಚ ಬೆಲ್ಲದ ಪುಡಿ
3 ಚಮಚ ತುಪ್ಪ
2 ಲೋಟ ಹಾಲು
2 ಏಲಕ್ಕಿ
2 ಲವಂಗ
4 ಚಮಚ ಒಣಕೊಬ್ಬರಿ ತುರಿ
1 ಚಮಚ ಗಸಗಸೆ
ಸ್ವಲ್ಪ ಬಾದಾಮಿ ಗೊಡಂಬಿ ಮತ್ತು ಒಣದ್ರಾಕ್ಶಿ

ಮಾಡುವ ಬಗೆ:

ಗೆಣಸನ್ನು ತೊಳೆದು ಕುಕ್ಕರಿನಲ್ಲಿ ಎರಡು ಕೂಗು ಕೂಗಿಸಿ ತಣ್ಣಗಾಗಲು ಬಿಡಿ. ಆರಿದ ನಂತರ ಗೆಣಸಿನ ಸಿಪ್ಪೆ ತೆಗೆದು, ಒಡೆದು ಪುಡಿಮಾಡಿ ಇಟ್ಟುಕೊಳ್ಳಿ.

ಬಾಣಲೆಗೆ ಒಂದು ಚಮಚ ತುಪ್ಪ ಹಾಕಿ ಬಿಸಿ ಮಾಡಿ, ಬಳಿಕ ಬಾದಾಮಿ, ಗೊಡಂಬಿ ಕುಟ್ಟಿ ಸಣ್ಣ ಚೂರುಗಳನ್ನಾಗಿ ಮಾಡಿ, ತುಪ್ಪಕ್ಕೆ ಹಾಕಿ ಹುರಿಯಿರಿ. ಮತ್ತೆ ಒಣ ದ್ರಾಕ್ಶಿ ಸೇರಿಸಿ ಸ್ವಲ್ಪ ಹುರಿಯಿರಿ. ಬಳಿಕ ಅದಕ್ಕೆ ಒಣಕೊಬ್ಬರಿ ತುರಿ, ಗಸಗಸೆ ಸೇರಿಸಿ, ಅದಾದ ಮೇಲೆ ಪುಡಿ ಮಾಡಿಟ್ಟುಕೊಂಡ ಗೆಣಸನ್ನು ಸೇರಿಸಿ ಸ್ವಲ್ಪ ಹೊತ್ತು ಹುರಿಯಿರಿ.

ಕೊನೆಗೆ ಬೆಲ್ಲ ಅತವಾ ಸಕ್ಕರೆ ಸೇರಿಸಿ, ಎರಡು ಲೋಟ ಹಾಲು ಹಾಕಿ, ಏಲಕ್ಕಿ, ಲವಂಗದ ಪುಡಿ ಮತ್ತೆ ಚೂರು ತುಪ್ಪ ಹಾಕಿ ತಿರುವಿದರೆ ಗೆಣಸಿನ ಪಾಯಸ ತಿನ್ನಲು ಸಿದ್ದ.

ಚಳಿಗಾಲದಲ್ಲಿ ಗೆಣಸು ಆರೋಗ್ಯಕ್ಕೆ ಒಳ್ಳೆಯದು. ಉಪವಾಸ ಇದ್ದಾಗಲೂ ಗೆಣಸಿನ ತಿನಿಸು ಶ್ರೇಶ್ಟ.

(ಚಿತ್ರ ಸೆಲೆ:  ಸವಿತಾ.)

ನಿಮಗೆ ಹಿಡಿಸಬಹುದಾದ ಬರಹಗಳು

1 Response

  1. K.V Shashidhara says:

    50ನೇ ಬರಹಕ್ಕೆ ಅಭಿನಂದನೆಗಳು

ಅನಿಸಿಕೆ ಬರೆಯಿರಿ:

%d bloggers like this: