ಮದುವೆ: ತವರುಮನೆ ಬೀಳ್ಕೊಡುವ ಹೊತ್ತು

– ನೇತ್ರಾವತಿ ಆಲಗುಂಡಿ.

ಮದುವೆ, Marriage

ಮಾತು ಮೌನವಾಗುವ ಹೊತ್ತು
ತವರುಮನೆ ಬೀಳ್ಕೊಡುವ ಹೊತ್ತು
ಗಂಡನಮನೆಯ ಪ್ರೀತಿಯರಸಿ ಹೊರಡುವ ಹೊತ್ತು
ಕಣ್ಣಂಚಲಿ ಹನಿ ನೀರು ಸುರಿಯುವ ಹೊತ್ತು

ಮದುವೆ ಮನೆಯ ಹರುಶ ಮುಗಿಯುವ ಹೊತ್ತು
ಸೋದರತೆಯ ವಾತ್ಸಲ್ಯದ ಪ್ರೀತಿ ಮೆರೆಯುವ ಹೊತ್ತು
ಸಂಬಂದಿಕರ ನಿಜ ರೂಪ ಬಯಲಾಗುವ ಹೊತ್ತು
ಹೆತ್ತವರ ಕರುಳಬಳ್ಳಿಯು ದೂರ ಸರಿಯುವ ಹೊತ್ತು

ಉಡಿ ತುಂಬಿಕೊಂಡು ಮನೆಯ ಮುದ್ದುಲಕ್ಶ್ಮಿ ಹೊರಡುವ ಹೊತ್ತು
ಮಡಿಲು ತುಂಬ ತವರುಮನೆಯ ನೆನಪು ಹೊರುವ ಹೊತ್ತು
ಆಟವಾಡಿದ ಮನೆಯ ತೊರೆದು ಗಂಡನ ಮನೆಯ ದೀಪ ಬೆಳಗುವ ಹೊತ್ತು
ಅವಳ ನಲಿವು ನೋವುಗಳಿಗೆ ಮುನ್ನುಡಿ ಬರೆಯುವ ಹೊತ್ತು

( ಚಿತ್ರ ಸೆಲೆ: pixabay.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ:

Enable Notifications