ನಂಬಿಹೆನು ನಿನ್ನ, ನಂಬು ನೀ ನನ್ನ

– ಪವನ್ ಕುಮಾರ್ ರಾಮಣ್ಣ (ಪಕುರಾ)

ಹ್ರುದಯ, ಒಲವು, Heart, Love

ನಂಬಿಹೆನು ನಿನ್ನ
ನಂಬು ನೀ ನನ್ನ
ಈ ಕೊರಗು ಸಾಕಿಂದು
ತಿರುಗಿ ಬಾ ಚಿನ್ನ

ದಿನ ಕಳೆಯಿತು ಹಲವು
ಕ್ಶಣಕೊಮ್ಮೆ ನೆನೆವೆ
ಕಾಲಕ್ಕೆ ಇರಬಹುದು ಮರೆವು
ಆದರೆ ನನಗಲ್ಲವೇ

ಎಲ್ಲ ಎದೆ ಬಡಿತಗಳು ನೆನೆದು
ಸೋಲುತಿವೆ ಇಂದು
ನೀ ತಿರುಗಿ ನೋಡಲಿಲ್ಲ
ಈ ಕೂಗನೆಂದು

ಸಹಿಸಲಾಗದು ನನ್ನಿಂದ
ಈ ಪರಿಯ ನೋವು
ಬಂದರು ಬಾರದಂತಿಹುದು
ಗಳಿಗೆ ಗಳಿಗೆಗೆ ಸಾವು

ಸತ್ತರೆ ಬರುವೆಯೇನೊ!
ಎಂದೊಮ್ಮೆ ನೆನೆದೆ
ಸಾವು ನೆನೆದು
ನಡುಗಿದೆ ನನ್ನೆದೆ

ಮರೆತೆಯಾ ನಮ್ಮ
ಗೆಳೆತನ, ಸಲುಗೆ
ನಿನ್ನ ಬಿಟ್ಟು ಹೋಗುವ
ಮನಸಿಲ್ಲ ನನಗೆ

ನಂಬಿಹೆನು ನಿನ್ನ, ನಂಬು ನೀ ನನ್ನ
ಈ ಕೊರಗು ಸಾಕಿಂದು ತಿರುಗಿ ಬಾ ಚಿನ್ನ

(ಚಿತ್ರ ಸೆಲೆ: wallarthd.com )

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: