ನಂಬಿಹೆನು ನಿನ್ನ, ನಂಬು ನೀ ನನ್ನ
ನಂಬಿಹೆನು ನಿನ್ನ
ನಂಬು ನೀ ನನ್ನ
ಈ ಕೊರಗು ಸಾಕಿಂದು
ತಿರುಗಿ ಬಾ ಚಿನ್ನ
ದಿನ ಕಳೆಯಿತು ಹಲವು
ಕ್ಶಣಕೊಮ್ಮೆ ನೆನೆವೆ
ಕಾಲಕ್ಕೆ ಇರಬಹುದು ಮರೆವು
ಆದರೆ ನನಗಲ್ಲವೇ
ಎಲ್ಲ ಎದೆ ಬಡಿತಗಳು ನೆನೆದು
ಸೋಲುತಿವೆ ಇಂದು
ನೀ ತಿರುಗಿ ನೋಡಲಿಲ್ಲ
ಈ ಕೂಗನೆಂದು
ಸಹಿಸಲಾಗದು ನನ್ನಿಂದ
ಈ ಪರಿಯ ನೋವು
ಬಂದರು ಬಾರದಂತಿಹುದು
ಗಳಿಗೆ ಗಳಿಗೆಗೆ ಸಾವು
ಸತ್ತರೆ ಬರುವೆಯೇನೊ!
ಎಂದೊಮ್ಮೆ ನೆನೆದೆ
ಸಾವು ನೆನೆದು
ನಡುಗಿದೆ ನನ್ನೆದೆ
ಮರೆತೆಯಾ ನಮ್ಮ
ಗೆಳೆತನ, ಸಲುಗೆ
ನಿನ್ನ ಬಿಟ್ಟು ಹೋಗುವ
ಮನಸಿಲ್ಲ ನನಗೆ
ನಂಬಿಹೆನು ನಿನ್ನ, ನಂಬು ನೀ ನನ್ನ
ಈ ಕೊರಗು ಸಾಕಿಂದು ತಿರುಗಿ ಬಾ ಚಿನ್ನ
(ಚಿತ್ರ ಸೆಲೆ: wallarthd.com )
ಇತ್ತೀಚಿನ ಅನಿಸಿಕೆಗಳು