ಸಾಬುದಾನಿ (ಸಬ್ಬಕ್ಕಿ) ಸಂಡಿಗೆ

– ಸವಿತಾ.

ಸಾಬುದಾನಿ, ಸಬ್ಬಕ್ಕಿ, ಸಂಡಿಗೆ, sabudani, sabbakki, sandige

ಬೇಕಾಗುವ ಸಾಮಾನುಗಳು

  • ಸಾಬುದಾನಿ (ಸಬ್ಬಕ್ಕಿ) – 1 ಬಟ್ಟಲು
  • ಜೀರಿಗೆ – 1 ಚಮಚ
  • ಉಪ್ಪು – 1 ಚಮಚ

ಮಾಡುವ ಬಗೆ

ಸಾಬುದಾನಿಯನ್ನು ತೊಳೆದು, ಬಳಿಕ ಸ್ವಲ್ಪ ನೀರು ಸೇರಿಸಿ ರಾತ್ರಿ ವೇಳೆ ನೆನೆ ಹಾಕಬೇಕು. ಬೆಳಿಗ್ಗೆ ಅರ‍್ದ ಲೋಟ ನೀರು, ಜೀರಿಗೆ, ಉಪ್ಪು ಸೇರಿಸಿ ಒಂದು ಕುದಿ ಕುದಿಸಿ. ಅಂಟು ಅಂಟಾಗುತ್ತಿದ್ದಂತೆ ಒಲೆ ಆರಿಸಿ ಹಾಗೆಯೇ ಬಿಡಿ. ಕಾರ ಬೇಕಾದರೆ ಹಸಿಮೆಣಸಿನಕಾಯಿ ಪೇಸ್ಟ್ ಮಾಡಿ ಸೇರಿಸಬಹುದು.

ತಣ್ಣಗಾದ ಮೇಲೆ ಒಂದು ಪ್ಲಾಸ್ಟಿಕ್ ಹಾಳೆಯ ಮೇಲೆ ಬೇಕಾದ ಅಳತೆಯ ಸಂಡಿಗೆ ಹಾಕಿ. ಇದನ್ನು ಎರಡು-ಮೂರು ದಿನ ಬಿಸಿಲಿನಲ್ಲಿ ಒಣಗಿಸಿ. ಚೆನ್ನಾಗಿ ಒಣಗಿದ ಸಂಡಿಗೆಯನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಈಗ ಸಾಬುದಾನಿ ಸಂಡಿಗೆ ತಯಾರು. ಇದನ್ನು ಹಾಗೆಯೇ ತಿನ್ನಬಹುದು ಇಲ್ಲವೇ ಊಟದ ಜೊತೆಯಲ್ಲೂ ತಿನ್ನಬಹುದು. ಅನ್ನ-ಸಾರು ಜೊತೆ ಈ ಸಂಡಿಗೆ ತಿನ್ನಲು ಚೆನ್ನಾಗಿರುತ್ತದೆ.

(ಚಿತ್ರ ಸೆಲೆ: ಸವಿತಾ)

ನಿಮಗೆ ಹಿಡಿಸಬಹುದಾದ ಬರಹಗಳು

ಅನಿಸಿಕೆ ಬರೆಯಿರಿ: